ಪಿ.ಎಮ್ .ಕಿಸಾನ್ ಸಮ್ಮಾನ್ ಯೋಜನೆಯ ನೆರವು ಸಿಗುವಂತೆ ಆದೇಶ ಹೊರಡಿಸಲು ಪ್ರಭಾಕರ ಪ್ರಭು ಆಗ್ರಹ

www.bantwalnews.com Report ಬಂಟ್ವಾಳನ್ಯೂಸ್ ವರದಿ

ಪ್ರಭಾಕರ ಪ್ರಭು

ಕೃಷಿ ಜಮೀನು ಹೊಂದಿರುವ ಎಲ್ಲಾ ಅರ್ಹ  ರೈತರ ಆದಾಯ ಹೆಚ್ಚಿಸಲು ನೆರವಾಗುವ ಉದ್ದೇಶಕ್ಕಾಗಿ ಪಿ.ಎಮ್ .ಕಿಸಾನ್ ಸಮ್ಮಾನ್ ಯೋಜನೆಯಡಿ ಫೆಬ್ರವರಿ 2019 ರ ನಂತರ ಕೃಷಿ ಭೂಮಿ ಹೊಂದಿರುವ ರೈತರಿಗೆ ನೆರವು ಸಿಗುವಂತೆ ಸೂಕ್ತ ಆದೇಶ ಹೊರಡಿಸುವಂತೆ ಬಂಟ್ವಾಳ ತಾ.ಪಂ.ನ ಮಾಜಿ ಸದಸ್ಯ ಪ್ರಭಾಕರ ಪ್ರಭು‌ ರಾಜ್ಯ ಕೃಷಿ ಸಚಿವರು ಹಾಗೂ ಕೃಷಿ ಆಯುಕ್ರನ್ನು ಲಿಖಿತ ಮನವಿ ಮೂಲಕ ಒತ್ತಾಯಿಸಿದ್ದಾರೆ.  2018  ಡಿ.1 ಅನ್ವಯವಾಗುವಂತೆ ಫೆಬ್ರವರಿ 2019 ರ ಒಳಗಾಗಿ ಸ್ವಾಧಿನದಲ್ಲಿರುವ ಭೂದಾಖಲೆಯಲ್ಲಿ  ಹೆಸರಿರುವ ಎಲ್ಲಾ ಅರ್ಹ ರೈತ ಕುಟುಂಬದವರಿಗೆ  2000 ಸಾ.ರೂ.ವಿನಂತೆ  ವಾರ್ಷಿಕ ಮೂರು ಕಂತುಗಳಲ್ಲಿ ಪ್ರಧಾನ ಮಂತ್ರಿ  ಕಿಸಾನ್ ಸಮ್ಮಾನ್ ಯೋಜನೆಯು 6000 ಸಾ.ರೂ. ರೈತರ ಖಾತೆಗಳಿಗೆ ನೇರವಾಗಿ ಸಹಾಯಧನ ರೂಪದಲ್ಲಿ ಅರ್ಥಿಕ ನೆರವು ನೀಡುತ್ತಿರುವುದು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ. ಆದರೆ 2019 ಪೆಬ್ರವರಿ ತಿಂಗಳ ನಂತರ ರಾಜ್ಯದಲ್ಲಿ ಅನೇಕ ರೈತ ಕುಟುಂಬಗಳು ಕೃಷಿ ಜಮೀನು ಖರೀದಿಸಿ ಹಾಗೂ ಪ್ರತ್ಯೇಕ ವಿಭಾಗ ಪತ್ರ ಮಾಡಿಕೊಂಡು ಮತ್ತು ಇನ್ನಿತರ ಮೂಲಗಳಿಂದ ಕೃಷಿ ಜಮೀನು ಹೊಂದಿರುವ ರೈತ ಕುಟುಂಬಗಳು ಈ ಯೋಜನೆಯಿಂದ ವಂಚಿತವಾಗಿವೆ.  ಈ ಮಹತ್ವಾಕಾಂಕ್ಷಿ  ಯೋಜನೆಯು ರಾಷ್ಟ್ರದ ಎಲ್ಲಾ ಅರ್ಹ ಕೃಷಿ ಜಮೀನು ಹೊಂದಿರುವ ರೈತ ಕುಟುಂಬಗಳಿಗೆ ತಲುಪುವುದು ಪ್ರಧಾನಿ  ನರೇಂದ್ರ ಮೋದಿಯವರ  ಆಶಯವಾಗಿದೆ.  ಈ ಹಿನ್ನಲೆಯಲ್ಲಿ ಫೆಬ್ರವರಿ 2019 ರ ನಂತರ ಕೃಷಿ ಭೂಮಿ ಹೊಂದಿರುವ ರೈತರಿಗೆ  ಈ ಯೋಜನೆಯ  ನೆರವು ಸಿಗುವ ನಿಟ್ಟಿನಲ್ಲಿ  ಸೂಕ್ತ ಆದೇಶ ಹೊರಡಿಸುವಂತೆ ಪ್ರಭು ಅವರು ಕೃಷಿ ಸಚಿವರನ್ನು ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಪಿ.ಎಮ್ .ಕಿಸಾನ್ ಸಮ್ಮಾನ್ ಯೋಜನೆಯ ನೆರವು ಸಿಗುವಂತೆ ಆದೇಶ ಹೊರಡಿಸಲು ಪ್ರಭಾಕರ ಪ್ರಭು ಆಗ್ರಹ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*