ಪಾಣೆಮಂಗಳೂರು ಗ್ರಾಮಲೆಕ್ಕಿಗರ ಕಚೇರಿ ಇರುವ ಶಿಥಿಲ ಕಟ್ಟಡಕ್ಕೆ ಬೇಕು ಕಾಯಕಲ್ಪ

ಈಗಲೋ ಆಗಲೋ ಬೀಳುವಂತಿದೆ ಈ ಬಿಲ್ಡಿಂಗ್

www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ

ಊರು ತುಂಬಾ ಡಿಜಿಟಲ್ ಇಂಡಿಯಾದ್ದೇ ಸದ್ದು. ಆದರೆ ಇಲ್ಲಿ ಅದರ ಗಾಳಿಯೂ ಪ್ರವೇಶಿಸಿಲ್ಲ. ಕಂಪ್ಯೂಟರ್, ಇಂಟರ್ನೆಟ್ ಬಿಡಿ, ನೆಟ್ಟಗೆ ಫ್ಯಾನ್ ಕಷ್ಟದಲ್ಲೇ ತಿರುಗುತ್ತದೆ. ಫೈಲುಗಳನ್ನು ರಕ್ಷಿಸಬೇಕೆಂದಿದ್ದರೆ, ಪ್ಲಾಸ್ಟಿಕ್ ನಲ್ಲಿ ಕಟ್ಟಿಡಬೇಕು. ಒಂದು ಕವಾಟು ಇರುವುದಷ್ಟೇ ಭದ್ರತೆ. ಮುರುಕಲು ಕುರ್ಚಿ, ಮೇಜುಗಳು. ಇವೆಲ್ಲಾ ಭದ್ರವಾಗಿ ಇರುವ ಎರಡು ಕೊಠಡಿಯಲ್ಲಿದ್ದರೂ ಕಟ್ಟಡವೇ ಗಟ್ಟಿ ಇಲ್ಲ. ಈಗಲೋ ಆಗಲೋ ಬೀಳುವಂಥ ಸ್ಥಿತಿ. ಇದು ಪಾಣೆಮಂಗಳೂರು ಗ್ರಾಮಲೆಕ್ಕಿಗರ ಕಚೇರಿ.

ಜಾಹೀರಾತು

ಇಲ್ಲಿ ಹಗಲು ಹೊತ್ತೇ ಹೆಗ್ಗಣಗಳು ಓಡಾಡುತ್ತವೆ, ಅವನ್ನು ಹುಡುಕಿಕೊಂಡು ಕೆಲವೊಮ್ಮೆ ಹಾವುಗಳು ಪ್ರವೇಶಿಸುತ್ತವೆ. ಮೆಲ್ಲಗೆ ಒದ್ದರೂ ಬಾಗಿಲು ಮುರಿಯುತ್ತದೆ. ಪಕ್ಕಾಸುಗಳು ಶಿಥಿಲವಾಗಿದ್ದು, ಬಿದ್ದರೆ ಅಚ್ಚರಿ ಇಲ್ಲ. ಮೆಟ್ಟಿಲು ಹತ್ತಿ ವೃದ್ಧರಿಗೆ ಬರಲೂ ಕಷ್ಟ. ಸ್ವಲ್ಪ ಆಯತಪ್ಪಿದರೆ ತಲೆ ಹೋಳಾಗುವಷ್ಟು ಆಳ. ಮಳೆಗಾಲದಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯ ನಂದಾವರಕ್ಕೆ ತೆರಳುವ ರಸ್ತೆಯ ಬಂಗ್ಲೆಗುಡ್ಡೆ ಎಂಬಲ್ಲಿರುವ ಈ ಶಿಥಿಲ ಕಟ್ಟಡದಲ್ಲಿ ವಿಎ, ಗ್ರಾಮಸಹಾಯಕರು ಸೇರಿ ಇಬ್ಬರು ಮಹಿಳಾ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ಬಂಟ್ವಾಳ ಪುರಸಭೆಯ ಕಟ್ಟಡದಲ್ಲಿ ಈ ಕಚೇರಿ ಕಾರ್ಯಾಚರಿಸುತ್ತಿದೆ. ಹಲವು ವರ್ಷಗಳ ಹಿಂದೆ ಪೂರ್ಣಪ್ರಮಾಣದಲ್ಲಿ ಪಾಣೆಮಂಗಳೂರು ಕಂದಾಯ ನಿರೀಕ್ಷಕರ ಕಚೇರಿಯೇ ಈ ಕಟ್ಟಡದಲ್ಲಿತ್ತು. ಪಾಣೆಮಂಗಳೂರು, ಬೊಂಡಾಲ, ಮೆಲ್ಕಾರ್ ಸಹಿತ ಸುತ್ತಮುತ್ತಲಿನ ಕಂದಾಯ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳು ಈ ಕಚೇರಿಯಲ್ಲಿರುತ್ತವೆ. ಇದು ಹೀಗೇ ಇರಬೇಕಾ, ಸುಧಾರಣೆ ಆಗಬೇಕಾ ಎಂಬ ನಿರ್ಧಾರ ಕೈಗೊಳ್ಳಬೇಕಾದವರು ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆ. ಸುಸಜ್ಜಿತ ಕಟ್ಟಡ ಬೇಕು ಎಂಬ ಒತ್ತಾಸೆ ಸಾರ್ವಜನಿಕರದ್ದು.

ಹಳೇ ನಾಡಕಚೇರಿ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಪಾಣೆಮಂಗಳೂರು ಗ್ರಾಮಲೆಕ್ಕಿಗರ ಕಚೇರಿ ಇರುವ ಶಿಥಿಲ ಕಟ್ಟಡಕ್ಕೆ ಬೇಕು ಕಾಯಕಲ್ಪ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*