![](https://i0.wp.com/bantwalnews.com/wp-content/uploads/2021/11/WhatsApp-Image-2021-11-14-at-17.57.29.jpeg?resize=629%2C1024&ssl=1)
![](https://i0.wp.com/bantwalnews.com/wp-content/uploads/2021/12/WhatsApp-Image-2021-12-21-at-09.43.30.jpeg?resize=722%2C1024&ssl=1)
![](https://i0.wp.com/bantwalnews.com/wp-content/uploads/2021/07/aaniya-darbar.jpeg?resize=456%2C640&ssl=1)
![](https://i0.wp.com/bantwalnews.com/wp-content/uploads/2021/11/BANTWALNEWS.jpg?resize=731%2C432&ssl=1)
ಬಂಟ್ವಾಳನ್ಯೂಸ್ ವರದಿ, www.bantwalnews.com REPORT
![](https://i0.wp.com/bantwalnews.com/wp-content/uploads/2021/12/LORETTO.jpg?resize=640%2C427&ssl=1)
ಬಂಟ್ವಾಳ: ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮವನ್ನು ಆಚರಿಸಲಾಯಿತು. ಬಲಿಪೂಜೆಯಲ್ಲಿ ನೂರಾರು ಭಕ್ತಾದಿಗಳು ಭಕ್ತಿಯಿಂದ ಯೇಸು ಕ್ರಿಸ್ತರ ಜನನವನ್ನು ಆಚರಿಸಿದರು. ಪ್ರಧಾನ ಧರ್ಮಗುರುಗಳಾಗಿ ಚರ್ಚ್ ಧರ್ಮಗುರುಗಳಾದ ವಂ.ಫ್ರಾನ್ಸಿಸ್ ಕ್ರಾಸ್ತಾ ,ವಂ. ಸಿಪ್ರಿಯನ್ , ವಂ. ಜೇಸನ್ ಮೋನಿಸ್ ಬಲಿಪೂಜೆಯನ್ನು ಅರ್ಪಿಸಿ ಶುಭ ಸಂದೇಶ ನೀಡಿದರು. ಏಸುಕ್ರಿಸ್ತರರ ಜನುಮ ದಿನಾಚರಣೆಯ ಪ್ರಮುಖ್ಯತೆ ಯ ಬಗ್ಗೆ ಲೊರೆಟ್ಟೊ ಅಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ವಂ.ಜೇಸನ್ ಮೊನಿಸ್ ಪ್ರವಚನ ನೀಡಿದರು. ಚರ್ಚ್ ಮುಖ್ಯ ರಸ್ತೆಯನ್ನು ಲೋರೆಟ್ಟೊ ಫ್ರೆಂಡ್ಸ್ (ರಿ) ಪ್ರಯೋಜಕತ್ವ ದಿಂದ ಕಂಗೊಳಿಸಲಾಗಿತ್ತು. ಬಲಿ ಪೂಜೆಯ ಬಳಿಕ ಐಸಿವೈಮ್ ಸದಸ್ಯರು ಮನರಂಜನ ಕಾರ್ಯಕ್ರಮವನ್ನು ನೀಡಿದರು. ಏಸುಕ್ರಿಸ್ತರ ಜನ್ಮ ದಿನವನ್ನು ಸಾರುವ ಗೋದಲಿಯನ್ನು ಐಸಿವೈಮ್ ಸದಸ್ಯರು ನಿರ್ಮಿಸಿದರು.
Be the first to comment on "ಲೊರೆಟ್ಟೊ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮ"