![](https://i0.wp.com/bantwalnews.com/wp-content/uploads/2021/11/WhatsApp-Image-2021-11-14-at-17.57.29.jpeg?resize=629%2C1024&ssl=1)
![](https://i0.wp.com/bantwalnews.com/wp-content/uploads/2021/12/WhatsApp-Image-2021-12-21-at-09.43.30.jpeg?resize=722%2C1024&ssl=1)
![](https://i0.wp.com/bantwalnews.com/wp-content/uploads/2021/07/aaniya-darbar.jpeg?resize=456%2C640&ssl=1)
![](https://i0.wp.com/bantwalnews.com/wp-content/uploads/2021/11/BANTWALNEWS.jpg?resize=731%2C432&ssl=1)
ಬಂಟ್ವಾಳನ್ಯೂಸ್ ವರದಿ, www.bantwalnews.com REPORT
![](https://i0.wp.com/bantwalnews.com/wp-content/uploads/2021/12/269404504_4809830682370955_511223391268286071_n.jpg?resize=777%2C792&ssl=1)
![](https://i0.wp.com/bantwalnews.com/wp-content/uploads/2021/12/269611995_4809831282370895_3064885188063447876_n.jpg?resize=777%2C777&ssl=1)
![](https://i0.wp.com/bantwalnews.com/wp-content/uploads/2021/12/IMG_20211221_170430-01.jpeg?resize=683%2C1024&ssl=1)
ಬಂಟ್ವಾಳನ್ಯೂಸ್ ವರದಿ: ಉದಯೋನ್ಮುಖ ಭರತನಾಟ್ಯ ಕಲಾವಿದೆ ಮಹಿಮಾ ಎಂ. ಪಣಿಕರ್ ರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಡಿ.26 ರ ಭಾನುವಾರ ಸಂಜೆ 5.45 ರಿಂದ ಬಂಟ್ವಾಳದ ಸ್ಪರ್ಶಕಲಾಮಂದಿರದಲ್ಲಿ ನಡೆಯಲಿದೆ.
ಡಾ.ಮನೋಜ್ ಹಾಗೂ ವಿದುಷಿ ವಿದ್ಯಾ ಮನೋಜ್ ದಂಪತಿಯ ಪುತ್ರಿಯಾಗಿರುವ ಮಹಿಮಾ, ತನ್ನ ತಾಯಿ ವಿದ್ಯಾಮನೋಜ್ ರವರಲ್ಲಿಯೇ ಭರತನಾಟ್ಯವನ್ನು ಅಭ್ಯಸಿಸಿದವರು. ಇವರ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್(ರಿ.) ಮೂಲಕ ಇನ್ನೂರಕ್ಕೂ ಅಧಿಕ ಏಕವ್ಯಕ್ತಿ ಹಾಗೂ ಸಮೂಹ ನೃತ್ಯ ದಲ್ಲಿ ಮಹಿಮಾ ಭಾಗವಹಿಸಿ ತನ್ನ ಪ್ರತಿಭೆಯನ್ನು ಮೇಳೈಸಿದ್ದಾರೆ. ರಂಗಪ್ರವೇಶ ಕಾರ್ಯಕ್ರಮದಲ್ಲಿ ‘ಶಾಂತಲಾ ನಾಟ್ಯ’ ಪುರಸ್ಕೃತ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್, ಪುತ್ತೂರು ಪದಡ್ಕದ ವಿಶ್ವಕಲಾನಿಕೇತನ ಕಲಾ ಮತ್ತು ಸಂಸ್ಕೃತಿ ಸಂಸ್ಥೆಯ ನೃತ್ಯಗುರು ವಿದುಷಿ ನಯನಾ ವಿ.ರೈ ಭಾಗವಹಿಸಲಿದ್ದಾರೆ.
Be the first to comment on "ಡಿ.26ರಂದು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಮಹಿಮಾ ಎಂ.ಪಣಿಕರ್ ಭರತನಾಟ್ಯ ರಂಗಪ್ರವೇಶ"