ಬಂಟ್ವಾಳನ್ಯೂಸ್ ವರದಿ, www.bantwalnews.com REPORT
ಬಂಟ್ವಾಳ: ಸರಪಾಡಿ ಯುವಕ ಮಂಡಲದ ವತಿಯಿಂದ ವಾಲಿಬಾಲ್ ಆಟಗಾರ ದಿ, ಜನಾರ್ದನ ಭಂಡಾರಿ ಸರಪಾಡಿ ಅವರ ಸ್ಮರಣಾರ್ಥ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಸರಪಾಡಿಯಲ್ಲಿ ನಡೆಯಿತು.
ಶ್ರೀ ಶರಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಸರಪಾಡಿ ಉದ್ಘಾಟಿಸಿದರು. ಆಡಳಿತ ಮೊಕ್ತೇಸರ ವಿಠಲ್ ಎಂ.ಆರುಮುಡಿ ಅಧ್ಯಕ್ಷತೆ ವಹಿಸಿದ್ದರು.ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ್ ಜೈನ್ ಹಾಗೂ ಬಂಟ್ವಾಳ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸುಪ್ರೀತ್ ಆಳ್ವ ಕ್ರೀಡಾಂಗಣ ಉದ್ಘಾಟಿಸಿದರು. ದ.ಕ.ಜಿಲ್ಲಾ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಪ್ರಸ್ತಾವನೆಗೈದರು.
ನಿವೃತ್ತ ಶಿಕ್ಷಕ ನರಸಿಂಹ ಐತಾಳ್ ಅರಮನೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ದಂತ ವೈದ್ಯ ಡಾ. ಬಾಲಚಂದ್ರ ಶೆಟ್ಟಿ ಮೀಯಾರು, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಮೊಡಂಕಾಪು ಕಾರ್ಮೆಲ್ ಪ.ಪೂ.ಕಾಲೇಜಿನ ಉಪನ್ಯಾಸಕ ಸುರೇಶ್ ನಂದೊಟ್ಟು, ಕೂರ್ಯಾಳ ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ಅಮರನಾಥ ಶೆಟ್ಟಿ ಕೂರ್ಯಾಳ, ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಕೊಟ್ಟುಂಜ, ಗೌರವಾಧ್ಯಕ್ಷ ಎಸ್.ಪಿ.ಸರಪಾಡಿ ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಪಡ್ಡಾಯಿಬೆಟ್ಟು ಸ್ವಾಗತಿಸಿದರು. ಸಮಾರೋಪ ಸಮಾರಂಭದಲ್ಲಿ ಸರಪಾಡಿ ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ ಧರ್ಣಪ್ಪ ಪೂಜಾರಿ ಬಹುಮಾನ ವಿತರಿಸಿದರು. ಮಣಿನಾಲ್ಕೂರು ಗ್ರಾ.ಪಂ.ಸದಸ್ಯ ಪುರುಷೋತ್ತಮ ಪೂಜಾರಿ ಮಜಲು, ನರ್ಸರಿ ಉದ್ಯಮಿ ಚೇತನ್ ತಿರ್ತೊಟ್ಟು ಮೊದಲಾದವರಿದ್ದರು.ಪಂದ್ಯಾಟದಲ್ಲಿ ಹರೀಶ್ ಮಠದಬೆಟ್ಟು ಮಾಲಕತ್ವದ ಶ್ರೀ ಸರಪಾಡಿ ತಂಡ ವಿನ್ನರ್ಸ್ ಜಿರಸ್ ಅಜಿಲಮೊಗರು ರನ್ನರ್ಸ್ ಕೈರಂಗಳ ಎಸ್‌ಕೆಜಿಸಿ ತೃತೀಯ ಹಾಗೂ ಸರಪಾಡಿ ಯುವಕ ಮಂಡಲ ಚತುರ್ಥ ಬಹುಮಾನ ಪಡೆಯಿತು. ವರುಣ್ ಉಡುಪಿ ಬೆಸ್ಟ್ ಆ್ಯಟಕರ್, ಸರ್ಫುರಾಜ್ ಬೆಸ್ಟ್ ಸೆಟ್ಟರ್ ಹಾಗೂ ರಾಕಿ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ ಪಡೆದರು.
Be the first to comment on "ಸರಪಾಡಿಯಲ್ಲಿ ದಿ.ಜನಾರ್ದನ ಭಂಡಾರಿ ಸ್ಮರಣಾರ್ಥ ಮುಕ್ತ ಹೊನಲು ಬೆಳಕಿನ ವಾಲಿಬಾಲ್"