ಬಂಟ್ವಾಳ: ಭಾನುವಾರ ಬೆಳಗ್ಗೆ 10ರಿಂದ ರಾತ್ರಿ 12ರವರೆಗೆ ಬಂಟ್ವಾಳದ ಹಲವೆಡೆ ಮದ್ಯದಂಗಡಿಗಳು ಬಂದ್ ಆಗಲಿವೆ. ಕಾರಿಂಜದಲ್ಲಿ ಹಿಂದು ಜಾಗರಣಾವೇದಿಕೆಯ ಜನಜಾಗೃತಿ ಸಭೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶವನ್ನು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಹೊರಡಿಸಿದ್ದಾರೆ.
ನ. 21ರ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಬಂಟ್ವಾಳ ನಗರ ಪೆÇಲೀಸ್ ಠಾಣಾ ವ್ಯಾಪ್ತಿಯ ಬಿ.ಸಿ ರೋಡ್, ಪಾಣೆಮಂಗಳೂರು, ಬಂಟ್ವಾಳ ಕಸಬ ಮತ್ತು ಅಮ್ಟಾಡಿ ಗ್ರಾಮ, ನರಿಕೊಂಬು, ಸಜಿಪ ಮೂಡ ಮತ್ತು ಸಜಿಪ ಮುನ್ನೂರು ಗ್ರಾಮ, ಗೊಳ್ತಮಜಲು ಮತ್ತು ಅಮ್ಟೂರು ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಕಾವಳಪಡೂರು ಮತ್ತು ಪುಂಜಾಲಕಟ್ಟೆ ಪೊಲೀಸ್ ಠಾಣಾ ಸರಹದ್ದುಗಳ ಮಾಲಾಡಿ, ಪಾರೆಂಕಿ, ಉಳಿ, ಪಿಲಾತಬೆಟ್ಟು, ಬಡಗಕಜೆಕಾರು, ಚೆನ್ನೈತ್ತೋಡಿ ಹಾಗೂ ಎಲಿಯನಡುಗೋಡು ವ್ಯಾಪ್ತಿಯ ಎಲ್ಲಾ ಬಾರ್, ವೈನ್ ಶಾಪ್, ಮದ್ಯಮಾರಾಟ ಮಳಿಗೆಗಳನ್ನು ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಕರ್ನಾಟಕ ಅಬಕಾರಿ ಕಾಯಿದೆ 1965ರ ಸೆಕ್ಷನ್ 21(1)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆದೇಶ ಹೊರಡಿಸಿದ್ದಾರೆ.
Be the first to comment on "ಕಾರಿಂಜದಲ್ಲಿ ಜನಜಾಗೃತಿ ಸಭೆ: ಇಂದು ಮದ್ಯದಂಗಡಿ ಬಂದ್ – ಜಿಲ್ಲಾಧಿಕಾರಿ ಆದೇಶ"