






ಬಂಟ್ವಾಳ: ನೈರುತ್ಯ ರೈಲ್ವೇ ಮಂಗಳೂರು ಭಾಗದ ಬಂಟ್ವಾಳ ರೈಲು ನಿಲ್ದಾಣದಲ್ಲಿ ಹಾದು ಹೋಗುವ ರೈಲುಗಳ ಕೋಚ್ ಸಂಖ್ಯೆ ಪ್ರದರ್ಶಿಸುವ ರೈಲ್ ಕೋಚ್ ನಾಮ ಪಲಕವನ್ನು ಲಯನ್ಸ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಮತ್ತು ಲಯನ್ಸ್ ಕ್ಲಬ್ ಬಂಟ್ವಾಳ ತನ್ನ 50ನೇ ವರ್ಷದ ಸೇವಾ ವರ್ಷದ ಕೊಡುಗೆಯಾಗಿ ಬಂಟ್ವಾಳ ರೈಲು ನಿಲ್ದಾಣದ ಫ್ಲಾಟ್ ಪಾರಂನಲ್ಲಿ ಅನಾವರಣಗೊಳಿಸಲಾಯಿತು.
ಲಯನ್ಸ್ ಕ್ಲಬ್ ಮತ್ತು ಟ್ರಸ್ಟ್ ಅಧ್ಯಕ್ಷರಾದ ಡಾ. ಬಿ. ವಸಂತ ಬಾಳಿಗಾ ಫಲಕವನ್ನು ಲೋಕಾರ್ಪಣೆ ಮಾಡಿದರು. ಬಂಟ್ವಾಳ ರೈಲ್ವೆ ಸ್ಟೇಷನ್ ಮಾಸ್ಟರ್‌ರವರಿಗೆ ಹಸ್ತಾಂತರಿಸಿ, ಬಂಟ್ವಾಳ ರೈಲು ನಿಲ್ದಾಣದಲ್ಲಿ ನಿಲ್ದಾಣಾಧಿಕಾರಿಗೆ ಬಳಕೆಯ ವಿಧಾನವನ್ನು ವಿವರಿಸಲಾಯಿತು. ಜಿಲ್ಲಾ ಸಂಪುಟದ ಪ್ರಧಾನ ಸಂಯೋಜಕ ದಾಮೋದರ ಬಿ.ಎಂ., ಜಿಲ್ಲಾ ಸಹ ಕಾರ್ಯದರ್ಶಿ ಲಕ್ಷ್ಮಣ ಕುಲಾಲ್, ವಲಯಾಧ್ಯಕ್ಷ ಎಂ. ಕೃಷ್ಣಶ್ಯಾಮ್, ಕುಕ್ಕೇಶ್ರೀ ಸುಬ್ರಹ್ಮಣ್ಯ- ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆ ಪುತ್ತೂರು ಇದರ ಸಂಚಾಲಕ ಸುದರ್ಶನ್ ಪುತ್ತೂರು ರೈಲು ನಿಲ್ದಾಣದ ನಿವೃತ್ತ ಸ್ಟೇಷನ್ ಮಾಸ್ಟರ್ ಲಯನ್ಸ್ ಸದಸ್ಯ ರವಿಶಂಕರ್ ಸೋಮಯಾಜಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಧೀರಜ್ ಹೆಬ್ರಿ, ಸದಸ್ಯರಾಧ ಸತ್ಯನಾರಾಯಣ ರಾವ್, ಮಧುಕರ ಶೆಟ್ಟಿ, ಮಾಧವ ಮಾರ್ಲ, ದೇವಿಕಾ ದಾಮೋದರ್, ತಫೋಧನ್ ಶೆಟ್ಟಿ, ರಾಮಯ್ಯ ಶೆಟ್ಟಿ, ಜಗದೀಶ್ ಬಿ.ಎಸ್. ಬೋರ್ಡನ್ನು ವಿನ್ಯಾಸಗೊಳಿಸಿದ ಜೇಮ್ಸ್ ಗಲ್ಭಾವೋ, ಮತ್ತಿತರರು ಉಪಸ್ಥಿತರಿದ್ದರು.
Be the first to comment on "ರೈಲಿನ ಯಾವ ಬೋಗಿ ಎಲ್ಲಿ ನಿಲ್ತದೆ? ಲಯನ್ಸ್ ವತಿಯಿಂದ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಹಾಕಲಾಗಿದೆ ಸೂಚನಾಫಲಕ"