ಬಂಟ್ವಾಳ

ಬಿಜೆಪಿ ಕಲೆ, ಸಾಂಸ್ಕೃತಿಕ ಪ್ರಕೋಷ್ಠ ಉದ್ಘಾಟನೆ: ಕಲಾವಿದರು ಸಂಘಟಿತರಾಗುವುದು ಅಗತ್ಯ – ಪಟ್ಲ ಸತೀಶ್ ಶೆಟ್ಟಿ

ಬಂಟ್ವಾಳ: ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಬಂಟ್ವಾಳ ಮಂಡಲದ ಪದಗ್ರಹಣ ಸಮಾರಂಭ ಹಾಗೂ ಕಾರ್ಮಿಕ ಇಲಾಖೆಯ ಮಾಹಿತಿ ಕಾರ್ಯಕ್ರಮ ಮತ್ತು ನೋಂದಣಿ ಅಭಿಯಾನ  ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.ಯಕ್ಷಧ್ರುವ ಪಟ್ಲ ಫೌಂಡೇಷನ್ ಸಂಸ್ಥಾಪಕ, ಭಾಗವತ ಸತೀಶ್ ಶೆಟ್ಟಿ ಪಟ್ಲ ಉದ್ಘಾಟಿಸಿ ಕಲಾವಿದರು ಸಂಘಟಿತರಾಗಬೇಕು, ಯಕ್ಷಗಾನ ಅಕಾಡೆಮಿಗೆ ಶೀಘ್ರ ಕಲಾವಿದರಿಗಾಗಿ ಮಿಡಿಯುವ ಅಧ್ಯಕ್ಷರ ಶೀಘ್ರ ನೇಮಕವಾಗಬೇಕು ಎಂದರು.

ಅಧ್ಯಕ್ಷತೆಯನ್ನು ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ವಹಿಸಿದ್ದರು. ಬುಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಅಧ್ಯಕ್ಷ  ಅಶೋಕ್ ಶೆಟ್ಟಿ ಸರಪಾಡಿ, ತಾಲೂಕು ಸಂಚಾಲಕ ದಿನೇಶ್ ರಾಯಿ ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆ ಅಧಿಕಾರಿ ಗ್ರೇಸ್ ಮೆಲ್ಬಿನ್ ಅಲ್ಮೇಡ  ಅವರು ಕಾರ್ಮಿಕ ಇಲಾಖೆಯ ಮಾಹಿತಿ ನೀಡಿದರು. ಸಂಚಾಲಕ ದಿನೇಶ್ ರಾಯಿ ಸ್ವಾಗತಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಅವರು ಕಾರ್ಯಕ್ರಮ ನಿರೂಪಿಸಿದರು. ಸಹಸಂಚಾಲಕ ರಾಜೇಶ್ ಕೊಯ್ಲ ವಂದಿಸಿದರು. ಪ್ರಮುಖರಾದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಬಿ.ಆರ್. ಕಬಕ, ಹೊನ್ನಪ್ಪ ಶ್ರೀಯಾನ್ ಶಂಭೂರು ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆ ಅಧಿಕಾರಿ ಮರ್ಲಿನ್ ಗ್ರೇಸಿ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ