




ಇಲ್ಲಿನ ಪಂಜಿಕಲ್ಲು ಗ್ರಾಮದ ಎನಿಲಕೋಡಿ ಎಂಬಲ್ಲಿ ಕೃಷಿಕರೊಬ್ಬರ ಪಂಪ್ ಶೆಡ್ಡಿಗೆ ಶನಿವಾರ ಸಂಜೆ ಸಿಡಿಲು ಬಡಿದ ಪರಿಣಾಮ ಲಕ್ಷಾಂತರ ಮೊತ್ತದ ನಷ್ಟ ಸಂಭವಿಸಿದೆ. ಇಲ್ಲಿನ ಪ್ರಗತಿಪರ ಕೃಷಿಕ ನಾರಾಯಣ ಬಂಗೇರ ಎಂಬವರ ಮನೆ ಮತ್ತು ಅಡಿಕೆ ತೋಟದ ಮಧ್ಯೆ ಇರುವ ಪಂಪ್ ಶೆಡ್ಡಿಗೆ ಶನಿವಾರ ರಾತ್ರಿ ಸುಮಾರು 8 ಗಂಟೆಗೆ ಸಿಡಿಲು ಬಡಿದ ಶಬ್ಧ ಕೇಳಿ ಬಂದಿದೆ. ಇದೇ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡು ಶೆಡ್ಡಿನಲ್ಲಿ ಭಾರೀ ಹೊಗೆ ಸಹಿತ ಬೆಂಕಿ ಕಾಣಿಸಿಕೊಂಡಿದೆ. ಶೆಡ್ಡಿನ ಮಾಡು ಸಂಪೂರ್ಣ ಸುಟ್ಟು ಕುಸಿದು ಬೀಳುತ್ತಿ ದ್ದಂತೆಯೇ ಒಳಗೆ ಗೋಣಿಯಲ್ಲಿ ತುಂಬಿಸಿಟ್ಟಿದ್ದ ಒಣ ಅಡಿಕೆ, ತೆಂಗಿನಕಾಯಿ, ಕೊಳವೆ ಬಾವಿ ಪಂಪ್ ಸಹಿತ ಅಡಿಕೆ ಕುಸಿಯುವ ಯಂತ್ರ, ಹುಲ್ಲು ಕಟಾವು ಯಂತ್ರ, ಪೀಠೋಪಕರಣಕ್ಕಾಗಿ ಸಂಗ್ರಹಿಸಿಟ್ಟ ಮರದ ತುಂಡುಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ಮೊತ್ತದ ಹಾನಿಯಾಗಿದೆ. ಇದೇ ವೇಳೆ ಅಡಿಕೆ ಮತ್ತು ತೆಂಗಿನ ತೋಟಕ್ಕೆ ಬೆಂಕಿ ಕೆನ್ನಾಲಿಗೆ ಹರಡುತ್ತಿ ದ್ದಂತೆಯೇ ಬಂಟ್ವಾಳ ಅಗ್ನಿಶಾಮಕ ದಳ ಎಸೈ ಅನಂತ ಎ.ಅಂಬಿಗ ನೇತೃತ್ವದ ತಂಡ ಬಂದು ಬೆಂಕಿ ನಂದಿಸಿದರು. ಗ್ರಾಮಕರಣಿಕ ಕುಮಾರ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ
Be the first to comment on "ಪಂಜಿಕಲ್ಲಿನ ಎನಿಲಕೋಡಿಯಲ್ಲಿ ಪಂಪ್ ಶೆಡ್ ಗೆ ಬಡಿದ ಸಿಡಿಲು, ಅಪಾರ ಹಾನಿ"