



ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಷೀಣಿಸುತ್ತಿರುವ ಭತ್ತದ ಕೃಷಿಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಹಡೀಲು ಭೂಮಿಯಲ್ಲಿ ಮತ್ತೆ ಭತ್ತದ ಕೃಷಿ ಚಟುವಟಿಕೆಗಳನ್ನು ನಡೆಸಲು ಜನರಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆ ಪ್ರಯುಕ್ತ ವಿಟ್ಲದ ಚೆಂಡುಕಳದ ಬಳಿಯ ಮಿತ್ತಳಿಕೆಯ ಸಂಕಪ್ಪ ಶೇಖ ಅವರ ಗದ್ದೆಯಲ್ಲಿ ಜುಲೈ29, 2021ರಂದು ಭತ್ತದ ನೇಜಿ ನೆಡುವ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಿತ್ತಳಿಕೆ ಯ ಕುಟುಂಬ,ಬಂಟ್ವಾಳ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ,ದಕ್ಷಿಣ ಕನ್ನಡ ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆಯ ಸಹಯೋಗ ದೊಂದಿಗೆ ಹಮ್ಮಿಕೊಳ್ಳಲಾಗಿತ್ತು.ಇದೀಗ ಮೂರು ತಿಂಗಳ ಬಳಿಕ ಭತ್ತದ ಫೈರನ್ನು ಕಟಾವು ಮಾಡುವ ಕಾರ್ಯದಲ್ಲಿ ಸ್ಥಳೀಯ ಭತ್ತದ ಕೃಷಿ ಕಾರ್ಮಿಕರ ಜೊತೆ ಪತ್ರಕರ್ತರು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಜೊತೆ ಉತ್ಸಾಹದಿಂದ ಭಾಗವಹಿಸಿ ಭತ್ತದ ಕೃಷಿಕರಿಗೆ ಪ್ರೋತ್ಸಾಹ ನೀಡುವ ವಿನೂತನ ಕಾರ್ಯಕ್ರಮ ನಡೆಸಿದರು.

ಜಿಲ್ಲೆಯಲ್ಲಿ ಬತ್ತದ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪತ್ರಕರ್ತರು ಬತ್ತದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜನರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಈ ಸಂದರ್ಭ ಹೇಳಿದರು.

ದಕ್ಷಿಣ ಕನ್ನಡ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಕಾರ್ಯ ನಿರತ ಪತ್ರಕ ರ್ತರ ಸಂಘ ಹಾಗೂ ಮಿತ್ತಳಿಕೆ ಕು ಟುಂಬದ ಸಹಯೋಗ ದೊಂದಿಗೆ ಭತ್ತದ ಪೈರು ಕಟಾವು ಕಾರ್ಯಕ್ಕೆ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಚಾಲನೆ ನೀಡಿದರು.


ಮಿತ್ತಳಿಕೆ ಕುಟುಂಬದ ಹಿರಿಯರಾದ ಸಂಕಪ್ಪ ಶೇಖ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ಮಿತ್ತಳಿಕೆ ಕುಟುಂಬದ ಸದಸ್ಯರಾದ ಸರಸ್ವತಿ ಆಳ್ವ, ದಯಾನಂದ ಆಳ್ವ, ಸೂರ್ಯನಾಥ ಆಳ್ವ, ವಿಜಯ ಶಂಕರ ಆಳ್ವ, ಬಿ.ಸಿ.ರೋಡಿನ ಸೂರ್ಯವಂಶ ಫೌಂಡೇಶನ್ ನ ಅಧ್ಯಕ್ಷ ಪ್ರೊ. ಗೋವರ್ಧನ ರಾವ್ , ಬಂಟ್ವಾಳ ಮತ್ತು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ಬತ್ತದ ಕೃಷಿ ಕಾರ್ಮಿಕರಿಗೆ ಜಿಲ್ಲಾಧಿಕಾರಿ ಸಾಂಕೇತಿಕವಾಗಿ ಅಕ್ಕಿ ವಿತರಿಸಿದರು.
Be the first to comment on "ನೇಜಿ ನೆಟ್ಟ ಗದ್ದೆಗೆ ಭೇಟಿ ನೀಡಿ ಭತ್ತದ ಕಟಾವು ಮಾಡಿದ ಪತ್ರಕರ್ತರು: ಭತ್ತದ ಕೃಷಿಗೆ ಪ್ರೋತ್ಸಾಹ ಶ್ಲಾಘನೀಯ – ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ"