ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ ಮತ್ತು ಎಸ್.ಎಲ್.ಎನ್.ಪಿ.ಪ್ರೌಢಶಾಲೆಗಳಲ್ಲಿ ಮತದಾರರ ಜಾಗೃತಿಗಾಗಿ ಮತದಾರರ ದಿನಾಚರಣೆಯ ಪ್ರಯುಕ್ತ ಬಂಟ್ವಾಳ ತಾಲೂಕು ಮಟ್ಟದ ಪ್ರಬಂಧ, ಭಿತ್ತಿಚಿತ್ರ, ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲಾ ನೋಡೆಲ್ ಮತ್ತು ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರಾದ ಶೋಭಾ ಉಪಸ್ಥಿತರಿದ್ದು ಶುಭ ಹಾರೈಸಿದರು. ತಾಲೂಕ ನೋಡೆಲ್ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ಸುಜಾತ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು. ಉಭಯ ಶಾಲೆಗಳ ಮುಖ್ಯ ಶಿಕ್ಷಕರಾದಭೋಜ ಮತ್ತು ರಮಾ ಭಂಡಾರಿ ಉಪಸ್ಥಿತರಿದ್ದರು.ಬೆಂಜನಪದವು ಪ್ರೌಢಶಾಲೆಯ ಶಿಕ್ಷಕರಾದ ದೇವದಾಸ್ ಇವರು ವಂದಿಸಿದರು. ಹೇಮಾ, ಹಿಲ್ಡಾ, ಸುಬ್ರಹ್ಮಣ್ಯ ರಾವ್,ಮರಳಿ ಕೃಷ್ಣರಾವ್, ಚೆನ್ನಕೇಶವ ಮತ್ತು ಯಶವಂತ ತೀರ್ಪುಗಾರರಾಗಿ ಸಹಕರಿಸಿದರು. ಹರಿಪ್ರಸಾದ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Be the first to comment on "ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ರಸಪ್ರಶ್ನೆ, ಪ್ರಬಂಧ, ಭಿತ್ತಿಚಿತ್ರ ಸ್ಪರ್ಧೆ"