ವಿಟ್ಲ ಸಮೀಪ ಮಂಗಳ ಮಂಟಪದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಕಂಪನಿ ನಿಯಮಿತ, ಬಂಟ್ವಾಳ ಕಾರ್ಯ ನಿರತ ಪತ್ರಕರ್ತರ ಸಂಘ, ಲಯನ್ಸ್ ಕ್ಲಬ್ ವಿಟ್ಲ, ಕಾರ್ತಿಕ್ ಫ್ರೆಂಡ್ಸ್ ಚಂದಳಿಕೆ, ಎಲ್. ಎನ್. ಎಸ್. ಎಂ. ಚಾರಿಟೇಬಲ್ ಟ್ರಸ್ಟ್, ಕೆ. ಎಂ. ಸಿ. ಹಾಸ್ಪಿಟಲ್ ಅತ್ತಾವರ ಮಂಗಳೂರು ಆಶ್ರಯದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಸಂಸ್ಥೆಯ ಬೆಳವಣಿಗೆಗೆ ರೈತರ ಸಹಕಾರ ಅವಶ್ಯಕವಾಗಿದೆ. ತೆಂಗು ಕಂಪನಿಯಿಂದ ಅಡಿಕೆ ಹಳದಿ ರೋಗ ನಿವಾರಣೆಗೆ ಔಷಧಿ ಸಂಶೋಧನೆಯಾಗಿರುವುದು ಮಹತ್ವದ ವಿಚಾರವಾಗಿದೆ. ರೈತರಿಂದ ರೈತರಿಗಾಗಿರುವ ಕಂಪನಿ ರೈತರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ತೆಂಗು ರೈತ ಉತ್ಪಾದಕರ ಕಂಪನಿ ವಿಜ್ಞಾನಿ ಡಾ. ಬಿ. ಕೆ. ವಿಶು ಕುಮಾರ್ ಹೇಳಿದರು.ಲಯನ್ಸ್ ಅಧ್ಯಕ್ಷ ಮೋನಪ್ಪ ಗೌಡ ಶುಭ ಹಾರೈಸಿದರು. ಸುಮಾರು 211 ಮಂದಿ ಶಿಬಿರದಲ್ಲಿ ಭಾಗವಹಿಸಿ ದಂತ ಚಿಕಿತ್ಸೆ, ಎಲುಬು, ಕೀಲು, ಕಣ್ಣು, ಕಿವಿ, ಜನರಲ್ ಮೆಡಿಸಿನ್, ಮಕ್ಕಳ, ಹೆಂಗಸರ ಹಾಗೂ ಚರ್ಮ ರೋಗಗಳ ತಪಾಸಣೆ ನಡೆಸಿದರು. ಅಧ್ಯಕ್ಷತೆಯನ್ನು ಎಲ್.ಎನ್.ಎಸ್.ಎಂ. ಚಾರಿಟೇಬಲ್ ಟ್ರಸ್ಟ್ ನ ಸಂತೋಷ್ ಶೆಟ್ಟಿ ವಹಿಸಿದ್ದರು. ಬಂಟ್ವಾಳ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಚಂದಳಿಕೆ ಕಾರ್ತಿಕ್ ಪ್ರೆಂಡ್ಸ್‌ನ ಕೃಷ್ಣ ಮುದೂರು, ಕೆ.ಎಂ.ಸಿ. ವೈದ್ಯಾಧಿಕಾರಿ ಡಾ. ಕನಿಷ್ಕ್, ದಂತ ವೈದ್ಯ ಡಾ. ಅವಿನಾಶ್, ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಕಂಪನಿ ನಿಯಮಿತ ಅಧ್ಯಕ್ಷ ಎಂ. ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಕುಸುಮ್ ರಾಜ್, ನಿರ್ದೇಶಕ ವರ್ಧಮಾನ್ ಜೈನ್, ಕಾರ್ಯ ನಿರ್ವಹಣಾಧಿಕಾರಿ ಜ್ಞಾನ ಮತ್ತಿತರರು ಉಪಸ್ಥಿತರಿದ್ದರು. ನೋಡಲ್ ಅಧಿಕಾರಿ ಸುಬ್ಬು ಸಂಟ್ಯಾರ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ವಿಟ್ಲ ಸಮೀಪ ಮಂಗಳ ಮಂಟಪದಲ್ಲಿ ಆರೋಗ್ಯ ತಪಾಸಣಾ ಶಿಬಿರ"