ಬಂಟ್ವಾಳ: ಬಾಂಗ್ಲಾದೇಶದಲ್ಲಿ ನವರಾತ್ರಿಯ ಸಮಯದಲ್ಲಿ ದುರ್ಗಾಪೂಜೆಯ ಸಾವಿರಾರು ಮಂಟಪಗಳನ್ನು ಮತ್ತು ಇಸ್ಕಾನ್ನ ಮಂದಿರದ ಮೇಲೆ ಆಕ್ರಮಣ ನಡೆಸಿದ ವಿಷಯದ ಕುರಿತು ಕಠಿಣ ಕ್ರಮ ಕೈಗೊಳ್ಳಲು ಅಲ್ಲಿನ ಸರ್ಕಾರವನ್ನು ಆಗ್ರಹಿಸುವಂತೆ ಪ್ರಧಾನಮಂತ್ರಿಯವರಿಗೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಮೂಲಕ ಹಿಂದು ಜನಜಾಗೃತಿ ಸಮಿತಿ ಮನವಿ ಸಲ್ಲಿಸಿದೆ.
ಈ ಸಂದರ್ಭ ಸಮಿತಿಯ ಕಿರಣ್, ರಾಧಾಕೃಷ್ಣ, ಅಜಿತ್, ಪ್ರವೀಣ್ ಮೇಲ್ಕಾರ್, ಜಯಕುಮಾರ್ ರಮೇಶ್ ಇದ್ದರು. ಹಿಂದೂಗಳ ಮೇಲೆ ಹಿಂಸಾತ್ಮಕ ಆಕ್ರಮಣ ನಡೆಸುವವರನ್ನು, ಮೂರ್ತಿಗಳನ್ನು ಒಡೆಯುವವರನ್ನು, ದುರ್ಗಾಪೂಜೆಯ ಮಂಟಪವನ್ನು ಹಾಳುಗೆಡಹಿದವರ ಮತ್ತು ಅವರ ಸೂತ್ರಧಾರರ ಮೇಲೆ ಕಠೋರ ಕ್ರಮ ಕೈಗೊಳ್ಳಬೇಕು, ಭಾರತ ಸರಕಾರವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳ ಮೇಲಿನ ಅತ್ಯಾಚಾರಗಳ ವಿಷಯವನ್ನು ಸಂಯುಕ್ತ ರಾಷ್ಟ್ರದ ಮುಂದಿಡಬೇಕು ಮತ್ತು ಈ ದೇಶಗಳ ಮೇಲೆ ಒತ್ತಡವನ್ನು ತರಬೇಕು. ಹಿಂದೂಗಳಿಗೆ ರಕ್ಷಣೆಯನ್ನು ಒದಗಿಸದಿದ್ದರೆ ಅಥವಾ ಇದೇ ಸ್ಥಿತಿಯು ಮುಂದುವರೆದರೆ ಬಾಂಗ್ಲಾದೇಶದೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿಯಲಾಗುವುದು ಜೊತೆಗೆ ಅವರ ಮೇಲೆ ನಿರ್ಬಂಧವನ್ನು ಹಾಕಲಾಗುವುದು ಎಂಬ ಎಚ್ಚರಿಕೆಯನ್ನು ಸಹ ಬಾಂಗ್ಲಾದೇಶಕ್ಕೆ ನೀಡಬೇಕು ಎಂದು ಮನವಿಯಲ್ಲಿ ಜಿಲ್ಲಾ ಸಮನ್ವಯಕಾರ ಚಂದ್ರ ಮೊಗೇರ ಒತ್ತಾಯಿಸಿದ್ದಾರೆ.
Be the first to comment on "ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ: ಕ್ರಮಕ್ಕೆ ಹಿಂದು ಜನಜಾಗೃತಿ ಸಮಿತಿ ಮನವಿ"