ಪಂಜಿಕಲ್ಲು: ಶ್ರೀ ಆದಿನಾಥ ಸ್ವಾಮಿ ಬಸದಿ ಮಾನಸ್ತಂಭ ಕಲ್ಲಿನ ಕೆತ್ತನೆಗೆ ಚಾಲನೆ

EDITED AND OWNED BY – HARISH MAMBADY. For Advertisements, News Contact Watsapp No: 9448548127

ಬಂಟ್ವಾಳ: ಇಲ್ಲಿನ ಪಂಜಿಕಲ್ಲು ಎಂಬಲ್ಲಿ ರೂ 2.5 ಕೋಟಿ ವೆಚ್ಚದಲ್ಲಿ ಪುನರ್ ನಿಮರ್ಾಣಗೊಂಡ ಶ್ರೀ ಆದಿನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ಮಾನಸ್ತಂಭ ಕಲ್ಲಿನ ಕೆತ್ತನೆಗೆ ಶುಕ್ರವಾರ ಚಾಲನೆ ನೀಡಲಾಯಿತು. ವಿವರಗಳಿಗೆ ಮುಂದೆ ಓದಿರಿ.

ಏಕಶಿಲಾ ಮಾನಸ್ಥಂಭ’ವು ದೊಡ್ಡಬಳ್ಳಾಪುರದಿಂದ ಸೋಮವಾರ ಆಗಮಿಸಿದೆ. ಪಂಜಿಕಲ್ಲುಪದವು ಎಂಬಲ್ಲಿ ಸೋಮವಾರ ಅದ್ದೂರಿ ಸ್ವಾಗತ ನೀಡಿದ ಬಳಿಕ ಆಕರ್ಷಕ ಮೆರವಣಿಗೆಯಲ್ಲಿ ಬಸದಿಗೆ ಮಾನಸ್ಥಂಭ ಕರೆ ತರಲಾಯಿತು. ನಿವೃತ್ತ ಪ್ರಾಂಶುಪಾಲ ರಾಜವೀರ ಇಂದ್ರ ಬಳ್ಳಮಂಜ ಮೆರವಣಿಗೆಗೆ ಚಾಲನೆ ನೀಡಿದರು. ಶ್ರಾವಕರು ಪೂಜಾ ವಿಧಿ ವಿಧಾನ ನೆರವೇರಿಸಿದರು.
ಪಂಜಿಕಲ್ಲು ಬಸದಿ ಆಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ಮುಂಬರುವ ಫೆಬ್ರವರಿ ತಿಂಗಳು ಬಸದಿ ಪುನರ್ ನಿಮರ್ಾಣ ಕಾಮಗಾರಿ ಪೂರ್ಣಗೊಂಡು ಪಂಚಕಲ್ಯಾಣೋತ್ಸವ ನಡೆಯಲಿದೆ. ತಾಲ್ಲೂಕಿನಲ್ಲಿ ಒಟ್ಟು 16 ಜೈನ ಬಸದಿಗಳ ಪೈಕಿ ಇದೇ ಪ್ರಥಮ ಬಾರಿಗೆ 32 ಅಡಿ ಎತ್ತರದ ಏಕಶಿಲಾ ಮಾನಸ್ಥಂಭ ಪ್ರತಿಷ್ಠಾಪಿಸಲಾಗುತ್ತಿದೆ. ಈಗಾಗಲೇ ರಾಷ್ಟ್ರೀಯ ಜೈನ್ ಮಿಲನ್ ಕಾಯರ್ಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಬಸದಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ ಎಂದರು. ಆಡಳಿತ ಸಮಿತಿ ಕಾರ್ಯದಶರ್ಿ ದೇವ ಕುಮಾರ್ ಇಂದ್ರ, ಪ್ರಮುಖರಾದ ನಿರಂಜನ್ ಜೈನ್ ಅಂತರ, ಸತೀಶ ಕುಮಾರ್ ಅಗರಿ, ಹಷರ್ೇಂದ್ರ ಜೈನ್ ಅಂತರ, ಚಂದ್ರಶೇಖರ ಇಂದ್ರ, ರತ್ನವರ್ಮ ಇಂದ್ರ, ಸುಭಾಶ್ಚಂದ್ರ ಜೈನ್ ಬಂಟ್ವಾಳ, ರಾಜೇಶ ಜೈನ್ ಪಡ್ರಾಯಿ, ಕೃಷ್ಣರಾಜ್ ಜೈನ್, ಜಿನಚಂದ್ರ ಜೈನ್, ಡಾ.ಶ್ರೀಮಂದರ ಜೈನ್, ಪದ್ಮಸ್ಮಿತ್ ಜೈನ್ ಹಿಣರ್ಿ, ಜಿತೇಂದ್ರ ಜೈನ್, ಮಹಾವೀರ ಜೈನ್ ಸಿದ್ಧಕಟ್ಟೆ, ವಿದ್ಯಾ ಕುಮಾರ್ ಇಂದ್ರ, ಮಧ್ವರಾಜ್ ಜೈನ್ ಸಿದ್ಧಕಟ್ಟೆ, ಪಾಂಡಿರಾಜ್ ಜೈನ್ ಪುಚ್ಚೇರು ಸಹಿತ ಸ್ಥಳೀಯ ನಾಗರಿಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಮಾನಸ್ತಂಭ ದಾನಿ ರಾಜೇಂದ್ರ ಜೈನ್ ದಂಪತಿ ತುಮಕೂರು, ಆಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ದೇವಕುಮಾರ್ ಇಂದ್ರ, ಹಷೇಂದ್ರ ಜೈನ್ ಅಂತರ,  ಭರತ್ ರಾಜ್ ಜೈನ್ ವೇಣೂರು, ಡಾ.ಸುದೀಪ್ ಕುಮಾರ್ ಸಿದ್ಧಕಟ್ಟೆ, ಶ್ರೇಯಾಂಸ ಜೈನ್ ಅಟ್ಲೊಟ್ಟು, ವಿದ್ಯ ಕುಮಾರ್ ಇಂದ್ರ, ರವೀಂದ್ರ ಜೈನ್ ಪಡ್ರಾಯಿ, ಶಿಲ್ಪಿ ಶ್ರೀನಿವಾಸ್ ಮತ್ತಿತರರು ಇದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ಪಂಜಿಕಲ್ಲು: ಶ್ರೀ ಆದಿನಾಥ ಸ್ವಾಮಿ ಬಸದಿ ಮಾನಸ್ತಂಭ ಕಲ್ಲಿನ ಕೆತ್ತನೆಗೆ ಚಾಲನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*