




ಬಂಟ್ವಾಳ: ಇಲ್ಲಿನ ಪಂಜಿಕಲ್ಲು ಎಂಬಲ್ಲಿ ರೂ 2.5 ಕೋಟಿ ವೆಚ್ಚದಲ್ಲಿ ಪುನರ್ ನಿಮರ್ಾಣಗೊಂಡ ಶ್ರೀ ಆದಿನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ಮಾನಸ್ತಂಭ ಕಲ್ಲಿನ ಕೆತ್ತನೆಗೆ ಶುಕ್ರವಾರ ಚಾಲನೆ ನೀಡಲಾಯಿತು. ವಿವರಗಳಿಗೆ ಮುಂದೆ ಓದಿರಿ.

ಪಂಜಿಕಲ್ಲು ಬಸದಿ ಆಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ಮುಂಬರುವ ಫೆಬ್ರವರಿ ತಿಂಗಳು ಬಸದಿ ಪುನರ್ ನಿಮರ್ಾಣ ಕಾಮಗಾರಿ ಪೂರ್ಣಗೊಂಡು ಪಂಚಕಲ್ಯಾಣೋತ್ಸವ ನಡೆಯಲಿದೆ. ತಾಲ್ಲೂಕಿನಲ್ಲಿ ಒಟ್ಟು 16 ಜೈನ ಬಸದಿಗಳ ಪೈಕಿ ಇದೇ ಪ್ರಥಮ ಬಾರಿಗೆ 32 ಅಡಿ ಎತ್ತರದ ಏಕಶಿಲಾ ಮಾನಸ್ಥಂಭ ಪ್ರತಿಷ್ಠಾಪಿಸಲಾಗುತ್ತಿದೆ. ಈಗಾಗಲೇ ರಾಷ್ಟ್ರೀಯ ಜೈನ್ ಮಿಲನ್ ಕಾಯರ್ಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಬಸದಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ ಎಂದರು. ಆಡಳಿತ ಸಮಿತಿ ಕಾರ್ಯದಶರ್ಿ ದೇವ ಕುಮಾರ್ ಇಂದ್ರ, ಪ್ರಮುಖರಾದ ನಿರಂಜನ್ ಜೈನ್ ಅಂತರ, ಸತೀಶ ಕುಮಾರ್ ಅಗರಿ, ಹಷರ್ೇಂದ್ರ ಜೈನ್ ಅಂತರ, ಚಂದ್ರಶೇಖರ ಇಂದ್ರ, ರತ್ನವರ್ಮ ಇಂದ್ರ, ಸುಭಾಶ್ಚಂದ್ರ ಜೈನ್ ಬಂಟ್ವಾಳ, ರಾಜೇಶ ಜೈನ್ ಪಡ್ರಾಯಿ, ಕೃಷ್ಣರಾಜ್ ಜೈನ್, ಜಿನಚಂದ್ರ ಜೈನ್, ಡಾ.ಶ್ರೀಮಂದರ ಜೈನ್, ಪದ್ಮಸ್ಮಿತ್ ಜೈನ್ ಹಿಣರ್ಿ, ಜಿತೇಂದ್ರ ಜೈನ್, ಮಹಾವೀರ ಜೈನ್ ಸಿದ್ಧಕಟ್ಟೆ, ವಿದ್ಯಾ ಕುಮಾರ್ ಇಂದ್ರ, ಮಧ್ವರಾಜ್ ಜೈನ್ ಸಿದ್ಧಕಟ್ಟೆ, ಪಾಂಡಿರಾಜ್ ಜೈನ್ ಪುಚ್ಚೇರು ಸಹಿತ ಸ್ಥಳೀಯ ನಾಗರಿಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮಾನಸ್ತಂಭ ದಾನಿ ರಾಜೇಂದ್ರ ಜೈನ್ ದಂಪತಿ ತುಮಕೂರು, ಆಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ದೇವಕುಮಾರ್ ಇಂದ್ರ, ಹಷೇಂದ್ರ ಜೈನ್ ಅಂತರ, ಭರತ್ ರಾಜ್ ಜೈನ್ ವೇಣೂರು, ಡಾ.ಸುದೀಪ್ ಕುಮಾರ್ ಸಿದ್ಧಕಟ್ಟೆ, ಶ್ರೇಯಾಂಸ ಜೈನ್ ಅಟ್ಲೊಟ್ಟು, ವಿದ್ಯ ಕುಮಾರ್ ಇಂದ್ರ, ರವೀಂದ್ರ ಜೈನ್ ಪಡ್ರಾಯಿ, ಶಿಲ್ಪಿ ಶ್ರೀನಿವಾಸ್ ಮತ್ತಿತರರು ಇದ್ದರು.
Be the first to comment on "ಪಂಜಿಕಲ್ಲು: ಶ್ರೀ ಆದಿನಾಥ ಸ್ವಾಮಿ ಬಸದಿ ಮಾನಸ್ತಂಭ ಕಲ್ಲಿನ ಕೆತ್ತನೆಗೆ ಚಾಲನೆ"