




ಬಂಟ್ವಾಳ: ಕವಿ, ಸಾಹಿತಿ ಸಂಘಟಕ ಬಿ.ತಮ್ಮಯ ಸ್ಮರಣಾರ್ಥ ರಾಜ್ಯಮಟ್ಟದ ಹನಿಗವನ ಸ್ಪರ್ಧೆಯನ್ನು ಯುವವಾಹಿನಿ(ರಿ) ಬಂಟ್ವಾಳ ತಾಲ್ಲೂಕು ಘಟಕ ಆಯೋಜಿಸುತ್ತಿದೆ. ಸ್ಪರ್ಧೆಯು ವಿದ್ಯಾರ್ಥಿ ವಿಭಾಗ ಮತ್ತು ಸಾರ್ವಜನಿಕ ವಿಭಾಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಆಸಕ್ತ ಕವಿಗಳು ತಮ್ಮ ಸ್ವರಚಿತ ನಾಲ್ಕು ಹನಿಗವನ/ಚುಟುಕಗಳನ್ನು ಕಳುಹಿಸಿಕೊಡಬೇಕು. ವಿದ್ಯಾರ್ಥಿ ವಿಭಾಗದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪ್ರಾಂಶುಪಾಲರ ದೃಢೀಕರಣ ಪತ್ರದೊಂದಿಗೆ ಸ್ವರಚಿತ ನಾಲ್ಕು ಹನಿಗವನಗಳನ್ನು ಅಕ್ಟೋಬರ್ 30 ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಲು ಸೂಚಿಸಲಾಗಿದೆ. ವಿಳಾಸ : ಅಧ್ಯಕ್ಷರು, ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕ,,ಯುವವಾಹಿನಿ ಭವನ, ಖಾಸಗಿ ಬಸ್ಸು ನಿಲ್ದಾಣದ ಹಿಂದುಗಡೆ, ಅಂಚೆ ಜೋಡುಮಾರ್ಗ, ಬಿ.ಸಿ ರೋಡ್ ಬಂಟ್ವಾಳ ತಾಲೂಕು 574219, ಸಂಪರ್ಕ ಸಂಖ್ಯೆ: 9141406588
Be the first to comment on "ಬಿ.ತಮ್ಮಯ ಸ್ಮರಣಾರ್ಥ ರಾಜ್ಯಮಟ್ಟದ ಹನಿಗವನ ಸ್ಪರ್ಧೆ: ಹನಿಗವನ/ಚುಟುಕಗಳ ಆಹ್ವಾನ"