ಬಂಟ್ವಾಳ: ಹಿಂದು ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ದೇವಸ್ಥಾನವನ್ನು ಪ್ರವೇಶಿಸಬೇಕಾಗಿ ವಿನಂತಿ.. ಈ ಸಂದೇಶವಿರುವ ಬೋರ್ಡ್ ಅನ್ನು ವಿಶ್ವಹಿಂದು ಪರಿಷತ್ತು, ಬಜರಂಗದಳದ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಅಳವಡಿಸಲಾಗಿದೆ.
ವಿಶ್ವ ಹಿಂದು ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಕಳೆದ ಏಪ್ರಿಲ್ ತಿಂಗಳಿನಲ್ಲಿ 3000 ಜನ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದ್ದರು. ಅದರಂತೆ ಆದಷ್ಟು ಬೇಗ ವಸ್ತ್ರಸಂಹಿತೆ ನೀತಿ ಜಾರಿಯಾಗಬೇಕೆಂದು ಬಂಟ್ವಾಳ ಪ್ರಖಂಡದ ವತಿಯಿಂದ ದೇವಾಸ್ಥಾನದಲ್ಲಿ ಶುಕ್ರವಾರ ವಸ್ತ್ರಸಂಹಿತೆ ಬೋರ್ಡ್ ಅಳವಡಿಸಲಾಯಿತು. ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮ್ಡೆಲ್, ಜಿಲ್ಲಾ ಸಹ ಸಂಚಾಲಕ್ ಗುರುರಾಜ್ ಬಂಟ್ವಾಳ್, ವಿ.ಹಿಂ.ಪ ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು, ಬಜರಂಗದಳ ಪ್ರಖಂಡ ಸಂಚಾಲಕ್ ಶಿವಪ್ರಸಾದ್ ತುಂಬೆ, ಸಂತೋಷ್ ಕೆ ಸರಪಾಡಿ, ದೀಪಕ್ ಬಂಟ್ವಾಳ್, ಪ್ರಸಾದ್ ಬೆಂಜನಪದವು, ರತೀಶ್ ರಾಮಲ್ ಕಟ್ಟೆ, ಪ್ರವೀಣ್ ಕುಂಟಾಲಪಲ್ಕೆ, ಅಶ್ವತ್ ಪೂಂಜಾಲ್ ಕಟ್ಟೆ, ಪೋಳಲಿ ಖಂಡ ಸಮಿತಿ ಹಾಗೂ ಘಟಕದ ಪ್ರಮುಖರು ಉಪಸ್ಥಿತರಿದ್ದರು
Be the first to comment on "ಪೊಳಲಿಯಲ್ಲಿ ವಿಹಿಂಪ, ಬಜರಂಗದಳದಿಂದ ಬೋರ್ಡ್ – ಸಾಂಪ್ರದಾಯಿಕ ವಸ್ತ್ರ ಧರಿಸಲು ವಿನಂತಿ"