




ಯುವಮೋರ್ಚಾ ನರಿಕೊಂಬು ಮಹಾಶಕ್ತಿ ಕೇಂದ್ರ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಇವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಈ ಸಂಧರ್ಭದಲ್ಲಿ ನರಿಕೊಂಬು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು, ದ.ಕ ಜಿಲ್ಲಾ ಹಿಂದುಳಿದ ಮೋರ್ಚ ಉಪಾಧ್ಯಕ್ಷರಾದ ಪುರುಷೋತ್ತಮ್ ಸಾಲಿಯಾನ್, ದ ಕ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ರಾದ ಪ್ರೇಮನಾಥ್ ಶೆಟ್ಟಿ, ಗೋಳ್ತಮಜಲು ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಕಮಲಾಕ್ಷಿ ಕೆ ಪೂಜಾರಿ, ಬಂಟ್ವಾಳ ಕ್ಷೇತ್ರ ಯುವ ಮೋರ್ಚಾ ಸದಸ್ಯರಾದ ರಾಜೇಶ್ ಬೋಳಂತೂರು ಹಾಗೂ ನರಿಕೊಂಬು ಯುವ ಮೋರ್ಚಾ ಅಧ್ಯಕ್ಷರಾದ ರಂಜಿತ್ ಮಾಣಿಮಜಲು ನರಿಕೊಂಬು ಗ್ರಾಮ ಸಂಚಾಲಕರಾದ ಕಿಶೋರ್ ಶೆಟ್ಟಿ ಅಂತರ, ಕ್ಷೇತ್ರ ಸಮಿತಿ ಸದಸ್ಯರಾದ ಶೋಭಾ ಶೆಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾದ ರವಿ ಅಂಚನ್, ನಾರಾಯಣ್ ದರ್ಖಾಸ್, ಚೇತನ್ ಏಲಬೆ ಹಾಗು ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.



Be the first to comment on "ಯುವಮೋರ್ಚಾ ಬಿಜೆಪಿ – ನರಿಕೊಂಬು ಗ್ರಾಮದಲ್ಲಿ ಕಾರ್ಯಕ್ರಮ"