




ಬಂಟ್ವಾಳ: ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಚಿಗುರು ಪರಿಸರ ಸಂಘದ ಆಶ್ರಯದಲ್ಲಿ ಕೈಕಂಬದ ಸರಿದಂತರ ಪ್ರಕಾಶನದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಬಿಲ್ವಪತ್ರೆ ಗಿಡ ವಿತರಿಸಲಾಯಿತು. ಸರಿದಂತರ ಪ್ರಕಾಶನದ ಸಂಚಾಲಕ ಪ್ರೊ. ರಾಜಮಣಿ ರಾಮಕುಂಜ ವಿದ್ಯಾರ್ಥಿಗಳಿಗೆ ಬಿಲ್ವಪತ್ರೆಯ ಔಷಧೀಯ ಗುಣಗಳು ಹಾಗೂ ಪ್ರಕೃತಿಯ ಸಮತೋಲನದ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಕಮಲಾಕ್ಷ ಗಿಡಗಳನ್ನು ಪೋಷಿಸುವ ಕುರಿತು ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು. ಶಾಲೆಯ ಚಿಗುರು ಪರಿಸರ ಸಂಘದ ಮುಖ್ಯಸ್ಥೆ, ಶಿಕ್ಷಕಿ ಭಾರತಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಸರಿದಂತರ ಪ್ರಕಾಶನದ ವತಿಯಿಂದ ಶಂಭೂರು ಬೊಂಡಾಲ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬಿಲ್ವಪತ್ರೆ ಗಿಡ ವಿತರಣೆ"