ಬಂಟ್ವಾಳ: ದೀನ್ ದಯಾಳ್ ಅವರ ದೇಶ ಪ್ರೇಮವನ್ನು ಬೆಳೆಸುವ ಪರಿಕಲ್ಪನೆಯನ್ನು ಪ್ರತಿ ಗ್ರಾಮದಲ್ಲಿ ಸಾಕಾರಗೊಳಿಸುವ ಪ್ರತಿಜ್ಞೆಯನ್ನು ಕಾರ್ಯಕರ್ತರು ಮಾಡಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ನರಿಕೊಂಬು ಗ್ರಾಮದ 111 ನೇ ಬೂತ್ ನಲ್ಲಿ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 105 ನೇ ಜನ್ಮ ದಿನಾಚರಣೆ ಅಂಗವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಮಾತನಾಡಿ ಚಳವಳಿ ಮತ್ತು ಸೇವೆಯ ಮೂಲಕ ಸಂಘಟನಾತ್ಮಕ ಬೆಳವಣಿಗೆಯ ಮೂಲಕಲ್ಪನೆ ಮತ್ತು ಸೇವೆ ಮತ್ತು ಸಮರ್ಪಣೆಯ ಪ್ರೇರಣೆ ದೀನ್ ದಯಾಳ್ ಉಪಾಧ್ಯಾಯ ಅವರದು ಎಂದರು.
ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತ ಪುರುಷೋತ್ತಮ, ನರಿಕೊಂಬು ಬೂತ್ ನ ಶಕ್ತಿ ಕೇಂದ್ರದ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಜಿಲ್ಲಾ ಹಿಂದುಳಿದ ಮೋರ್ಚಾದ ಉಪಾಧ್ಯಕ್ಷ ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಜಿ.ಪಂ. ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಗ್ರಾ.ಪಂ.ಸದಸ್ಯರಾದ ರವಿ ಅಂಚನ್, ಅರುಣ್ ಕುಲಾಲ್ ಬೋರುಗುಡ್ಡೆ, ಚೇತನ್ ದಿಂಡಿಕೆರೆ, ನಾರಾಯಣ ದರ್ಖಾಸು, ವಿಶಾಲಾಕ್ಷಿ ರಮಾನಂದ, ಚಿತ್ರಾಕ್ಷಿ ಸುರೇಶ್ ಕುಲಾಲ್, ಶುಭಾಶಶಿಧರ್, ಮೋಹಿನಿ ವಾಮನ ಕುಲಾಲ್, ಬೂತ್ ಸಂಚಾಲಕ ಕಿಶೋರ್ ಶೆಟ್ಟಿ, ಸಹಸಂಚಾಲಕ ರಂಜಿತ್ ಮಾಣಿಮಜಲು, ಕ್ಷೇತ್ರ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಹಿರಿಯ ರಾದ ರಘು ಸಪಲ್ಯ, ರೈತ ಮೋರ್ಚಾದ ಜಿಲ್ಲಾ ಸದಸ್ಯ ಪ್ರೇಮನಾಥ ಶೆಟ್ಟಿ, ಪ್ರಮುಖರಾದ ರಾಜೇಶ್ ಬೋಳಂತೂರು, ಶೋಭಾ ಶೆಟ್ಟಿ, ರೋಹಿತ್ ಪೂಜಾರಿ ಬೋಳಂತೂರು, ದಯಾನಂದ ನೆಲ್ಯಡ್ಕ, ಪ್ರಕಾಶ್ ನೆಲ್ಯಡ್ಕ, ಪ್ರಜಿತ್ , ಚರಣ್, ಪುರುಷೋತ್ತಮ ಬಂಗೇರ ನಾಟಿ, ಪ್ರಶಾಂತ್ ಶಾಂತಿ, ಕರುಣಾಕರ , ಪುರುಷೋತ್ತಮ ಕೊಪ್ಪಳಕೋಡಿ ಮತ್ತಿತರರು ಉಪಸ್ಥಿತರಿದ್ದರು.ಸಮರ್ಪಣಾ ಕಾರ್ಯ ಕ್ರಮದ ಅಂಗವಾಗಿ ಕೋವಿಡ್ ಸಮಯದಲ್ಲಿ ನಿಯಂತ್ರಣಕ್ಕಾಗಿ ಮತ್ತು ಜನರ ವಿಶೇಷ ಸೇವೆ ಮಾಡಿದ ನರಿಕೊಂಬು ಗ್ರಾಮಪಂಚಾಯತ್ ಸಿಬ್ಬಂದಿ ಪ್ರವೀಣ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
Be the first to comment on "ದೇಶಪ್ರೇಮ ಬೆಳೆಸುವ ಕಲ್ಪನೆ ಸಾಕಾರಗೊಳಿಸಿ: ನರಿಕೊಂಬಿನಲ್ಲಿ ಶಾಸಕ ರಾಜೇಶ್ ನಾಯ್ಕ್"