ಮೋದಿ ಬರ್ತ್ ಡೇ: ಯಾಸೀರ್ ಕಲ್ಲಡ್ಕ ಅವರಿಂದ ವಿಶೇಷ ಸಂಗ್ರಹ

KALLADKA MUSEUM

ಬಂಟ್ವಾಳ: ಫ್ಯಾನ್ಸಿ ನಂಬರ್ ಗಳ ನೋಟುಗಳ ಸಂಗ್ರಹದ ಮೂಲಕ ಗಮನ ಸೆಳೆದಿರುವ ಮಹಮ್ಮದ್ ಯಾಸೀರ್ ಕಲ್ಲಡ್ಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದಕ್ಕೊಂದು ವಿಶೇಷ ಸಂಗ್ರಹ ಮಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ಪ್ರಧಾನಿ ಎಂಬ ಗೌರವ- ಅಭಿಮಾನದಿಂದ ನಾನು ಈ ವಿಶೇಷ ಸಂಗ್ರಹ ನಡೆಸಿದ್ದೇನೆ, ಇಲ್ಲಿ‌ ರಾಜಕೀಯದ ಯಾವುದೇ ಹಿತಾಸಕ್ತಿ ಇಲ್ಲ. ಸಂಗ್ರಹಗಳು ಮುಂದಿನ ತಲೆಮಾರುಗಳಿಗೂ ಜ್ಞಾನವನ್ನು ನೀಡಬೇಕೆನ್ನುವುದು ನನ್ನ‌ ಪ್ರತೀ ಸಂಗ್ರಹದ ಉದ್ದೇಶ ಎನ್ನುತ್ತಾರೆ ಯಾಸಿರ್. 17/09/1950 ಪ್ರಧಾನಿ ನರೇಂದ್ರ ಮೋದಿಯವರ ಜನ್ಮ‌ದಿನವಾಗಿದ್ದು, ಈ ಸಂಖ್ಯೆಯ ನೋಟಿನ ಜೊತೆಗೆ “ಕಲೆಕ್ಷನ್ ಆಫ್ 100 ಬರ್ತ್ ಡೇಟ್ ನೋಟ್ಸ್” ಎನ್ನುವ  ಡೈರಿಯನ್ನು  ಯಾಸಿರ್ ಸಿದ್ಧಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ‌ ಚಲಾವಣೆಗೆ ಬಂದಿರುವ ಇಪ್ಪತ್ತು ರೂಪಾಯಿಯ ಹೊಸ‌ನೋಟಿನಲ್ಲೇ ಪ್ರಧಾನಿ ಮೋದಿಯವರ ಜನ್ಮದಿನಾಂಕದ ಸಂಖ್ಯೆ ಯನ್ನು ಹುಡುಕಿ ಸಂಗ್ರಹಿಸಿರುವ ಯಾಸೀರ್ , 100 ಹುಟ್ಟುಹಬ್ಬದ ಪರಿಕಲ್ಪನೆಯನ್ನು ಡೈರಿಯಲ್ಲಿ‌ ನೀಡಿದ್ದಾರೆ. ಪ್ರತಿ ಪುಟದಲ್ಲಿ‌ 5 ನೋಟಿನಂತೆ ಇಪ್ಪತ್ತು ಪುಟಗಳ ಈ ಡೈರಿಯಲ್ಲಿ ಮೋದಿ ಜೀವನದ ಪ್ರಮುಖ ಘಟ್ಟಗಳನ್ನು ಆಯಾ ವರ್ಷಕ್ಕೆ‌ ಸಂಬಂಧಿಸಿದ ಪುಟಗಳಲ್ಲಿ ದಾಖಲಿಸಲಾಗಿದೆ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮೋದಿ ಬರ್ತ್ ಡೇ: ಯಾಸೀರ್ ಕಲ್ಲಡ್ಕ ಅವರಿಂದ ವಿಶೇಷ ಸಂಗ್ರಹ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*