ಬಂಟ್ವಾಳ: ಬಂಟ್ವಾಳ ತಾಲೂಕಿನ ಕಡೇಶಿವಾಲಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಸಜ್ಜಿತ ಶೌಚಾಲಯವೊಂದು ನಿರ್ಮಾಣವಾಗಿದೆ. ವಂಡರ್ ಲಾ ತನ್ನ ಸಿ.ಎಸ್.ಆರ್. ನಿಧಿಯಿಂದ ನೀಡಿದ ಅನುದಾನದೊಂದಿಗೆ ಜಿಪಂ, ಗ್ರಾಪಂನ ನೆರವೂ ಸೇರಿಸಿಕೊಂಡು ಈ ಶೌಚಾಲಯವನ್ನು ನಿರ್ಮಿಸಲಾಗಿದೆ. 1935ರಲ್ಲಿ ಶಾಲೆ ನಿರ್ಮಾಣವಾಗಿದ್ದು, ಸುಸಜ್ಜಿತ ಶೌಚಾಲಯದ ಅವಶ್ಯಕತೆಯನ್ನು ಮನಗಂಡು ಹಾಗೂ ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾದ ಶೌಚಾಲಯ ನಿರ್ಮಿಸುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ವಂಡರ್ ಲಾ ಹಾಲಿಡೇಸ್ ತನ್ನ ಸಿಎಸ್‌ಆರ್ ನಿಧಿಯಲ್ಲಿ ಶೌಚಾಲಯವನ್ನು ನಿರ್ಮಿಸಲು ದೇಣಿಗೆ ಕೊಟ್ಟಿದೆ.
ಗ್ರಾಪಂ ಅಧ್ಯಕ್ಷ ಸುರೇಶ್ ಬನಾರಿ ಅಧ್ಯಕ್ಷತೆಯಲ್ಲಿ ಇದನ್ನು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಹಸ್ತಾಂತರಿಸಲಾಗಿದೆ. ಜಿಪಂ ಮಾಜಿ ಸದಸ್ಯರಾದ ಕಮಲಾಕ್ಷಿ ಪೂಜಾರಿ, ವಂಡರ್ ಲಾ ಕಚೇರಿಯ ಮಂಗಳೂರು ಮ್ಯಾನೇಜರ್ ಸಂತೋಷ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ರಮೇಶ್ ಆಚಾರ್ಯ, ಶಾಲಾ ಮುಖ್ಯ ಶಿಕ್ಷಕಿ ಉಮಾವತಿ, ಆಂಗ್ಲ ಮಾಧ್ಯಮ ಶಾಲಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾಧವ ರೈ, ಗ್ರಾಪಂ ಸದಸ್ಯರು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುಧಾಕರ ಭಟ್, ಗುತ್ತಿಗೆ ಇಂಜಿನಿಯರ್ ದಯಾನಂದ ಶೆಟ್ಟಿ ಮತ್ತಿತರರು ಈ ಸಂದರ್ಭ ಇದ್ದರು.
Be the first to comment on "ವಂಡರ್ ಲಾ ನೆರವು: ಕಡೇಶಿವಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲೀಗ ಸುಸಜ್ಜಿತ ಶೌಚಾಲಯ"