




ಬಂಟ್ವಾಳ: ರೋಟರಿ ಕ್ಲಬ್ ಬಿಸಿರೋಡ್ ಸಿಟಿ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರ ಉಪ್ಪಿನಂಗಡಿ ನೇತ್ರಾಧಿಕಾರಿ ಎಸ್ ಶಾಂತರಾಜ್ ಸಹಭಾಗಿತ್ವದಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಣ್ಣಿನ ನೂನ್ಯತೆ ಇರುವಂತಹ 25 ಆಶಾ ಕಾರ್ಯಕರ್ತೆಯರಿಗೆ ಕನ್ನಡಕ ವಿತರಣೆ ಹಾಗು ಕೊರೊನ ವಾರಿಯರ್ಸ್ಅವರಿಗೆ ಕ್ಲಬ್ ವತಿಯಿಂದ ಕಣ್ಣಿನ ತಪಾಸಣೆ ಕೋವಿಡ್ ರೋಗದ ಮುಂಜಾಗ್ರತೆ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಪರಿಸರ ಜಾಗ್ರತೆ ಕಾರ್ಯಕ್ರಮವನ್ನು ಸಸಿವಿತರಣೆ ಮಾಡಲಾಯಿತು. ವೈದ್ಯಾಧಿಕಾರಿ ಡಾ. ಶಿಶಿರ, ಜಿ.ಎಸ್.ಆರ್. ಪಿಎಚ್ ಎಫ್ ಪದ್ಮನಾಭ ರೈ, ಅಧ್ಯಕ್ಷರಾಧ ಪಿ.ಎಚ್.ಎಫ್. ಸತೀಶ್, ಕಾರ್ಯದರ್ಶಿ ಪಲ್ಲವಿ ಕಾರಂತ್, ಪ್ರಶಾಂತ್ ಕಾರಂತ್, ಗಣೇಶ್ ಶೆಟ್ಟಿ, ಸುಂದರ್ ಬಂಗೇರ ಉಪಸ್ಥಿತರಿದ್ದರು.



Be the first to comment on "ಬಿ.ಸಿ.ರೋಡ್ ಸಿಟಿ ರೋಟರಿ ಕ್ಲಬ್ ನಿಂದ ನೆಲ್ಯಾಡಿಯಲ್ಲಿ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ"