





ಬಂಟ್ವಾಳ: ಆರೋಗ್ಯ ಕೇಂದ್ರ ವಿಟ್ಲ ,ಉಪಕೇಂದ್ರ ವೀರಕಂಭ, ಗ್ರಾಮ ಪಂಚಾಯತ್ ವೀರಕಂಭ ಸಹಕಾರದೊಂದಿಗೆ ಉಚಿತ ಕೋವಿಡ್ ಲಸಿಕ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರಕಂಭ ಇಲ್ಲಿ ನಡೆಯಿತು. ವೀರಕಂಭ ಗ್ರಾಮದ ಪಂಚಾಯತ್ ಅಧ್ಯಕ್ಷರಾದ ದಿನೇಶ ಆರೋಗ್ಯ ಸಹಾಯಕಿಯರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ರಕ್ಷಾಬಂಧನದ ನಿಮಿತ ರಾಖಿ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಾಯತ್ ಸದಸ್ಯರಾದ ಜನಾರ್ಧನ ಗೋಳಿಮಾರು, ಜಯಪ್ರಸಾದ್ ಕೆಲಿಂಜ, ಮೀನಾಕ್ಷಿ ಸುನಿಲ್, ಉದ್ಯಮಿ ಸಂದೀಪ್ ಕುಮಾರ್ ಶೆಟ್ಟಿ, ವೀರಕಂಬ ಬಿಲ್ಲವ ಸಂಘದ ಅಧ್ಯಕ್ಷ ಜಯಪ್ರಕಾಶ ತೆಕ್ಕಿಪಾಪು, ಮಜಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಮೈರ ಮೊದಲಾದವರು ಉಪಸ್ಥಿತರಿದ್ದರು.

Be the first to comment on "ವೀರಕಂಭ: ಕೋವಿಡ್ ಲಸಿಕಾ ಶಿಬಿರದಲ್ಲಿ ರಕ್ಷಾಬಂಧನ"