ಮಾಣಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಸ್ವಾಗತಿಸುವುದರೊದಿಗೆ ರಕ್ಷಾ ಬಂಧನ ಕಾರ್ಯಕ್ರಮವನ್ನೂ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆಯವರು, ರಕ್ಷಾ ಬಂಧನ ಎನ್ನುವುದು ಪ್ರೀತಿ, ವಾತ್ಸಲ್ಯ, ಮಮಕಾರ ಮತ್ತು ಸಾಮರಸ್ಯ ಹಾಗೂ ಸಹೋದರತೆಯ ಸಂಕೇತ. ಎಲ್ಲರೂ ಒಬ್ಬರಿಗೊಬ್ಬರು ತಿಳಿದು ಅರ್ಥೈಸಿಕೊಂಡು ಜೀವಿಸಿದಾಗ ಸಮಾಜದಲ್ಲಿ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.
ಪಂಚಾಯತ್ ಗೆ ನೂತನವಾಗಿ ವರ್ಗಾವಣೆಗೊಂಡು ಬಂದಿರುವ ಪಿಡಿಒ ಗಿರಿಜರವರನ್ನು ಸ್ವಾಗತಿಸಲಾಯಿತು. ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರುಗಳಾದ ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ರಮಣಿ.ಡಿ.ಪೂಜಾರಿ ಉಪಸ್ಥಿತರಿದ್ದರು. ಪಿಡಿಒ ನಾರಾಯಣ ಗಟ್ಟಿ ಸ್ವಾಗತಿಸಿದರು
Be the first to comment on "ಮಾಣಿ ಗ್ರಾಪಂನಲ್ಲಿ ರಕ್ಷಾಬಂಧನ ಆಚರಣೆ, ಅಧಿಕಾರ ಹಸ್ತಾಂತರ ಕಾರ್ಯಕ್ರಮ"