




ಬಂಟ್ವಾಳ: ಬಂಟ್ವಾಳ ವಲಯ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ) ನಿಂದ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ 182ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ವಲಯಾಧ್ಯಕ್ಷ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಹಿರಿಯ ಸದಸ್ಯ ಛಾಯಾಗ್ರಾಹಕ ವಿಟ್ಲದ ಶೆಟ್ಟಿ ಸ್ಟುಡಿಯೋದ ಜನಾರ್ದನ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಜಿಲ್ಲಾ ಕೋಶಾಧಿಕಾರಿ ಆನಂದ್ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಕೋಶಾಧಿಕಾರಿ ವಿಕ್ರಂ ಸ್ವಾಗತಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ವಿಕೇಶ್ ವಂದಿಸಿದರು. ಎಸ್.ಕೆ.ಪಿ.ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಹರೀಶ್ ರಾವ್, ಮಾಜಿ ವಲಯಾಧ್ಯಕ್ಷ ಸತೀಶ್ ಕುಮಾರ್, ದಯಾನಂದ್ ಬಂಟ್ವಾಳ್, ಹರೀಶ್ ಮಾಣಿ, ವಲಯ ಉಪಾಧ್ಯಕ್ಷ ಹರೀಶ್ ನಾಟಿ, ಕಿಶೋರ್, ರೋಶನ್, ಜನಾರ್ಧನ ಶೆಟ್ಟಿ ಪುತ್ರವಲಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Be the first to comment on "ಬಿ.ಸಿ.ರೋಡಿನಲ್ಲಿ ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ನಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ"