ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ರಾಯಿ ವಲಯ ವತಿಯಿಂದ ಸುವರ್ಣನಾಡಿನ ಶ್ರೀ ದುರ್ಗಾಂಬಿಕ ಸಿದ್ದೇಶ್ವರಿ ಸಭಾಭವನದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ನಡೆಯಿತು.
ನಿವೃತ್ತ ಮುಖ್ಯೋಪಾಧ್ಯಾಯ ವೇದಾನಂದ ಕಾರಂತ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಕ್ಷೇತ್ರ ದುರ್ಗಾಂಬಿಕಾ ಸಿದ್ದೇಶ್ವರಿ ದೇವಸ್ಥಾನದ ಶ್ರೀ ವಿಶ್ವನಾಥ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಕೋರಲಾಯಿತು. ಪ್ರಕಾಶ್ ಬೆಳ್ಳೂರು ದಿಕ್ಸೂಚಿ ಭಾಷಣ ಮಾಡಿದರು. ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕಿನ ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ತಲೆಂಬಿಲ, ಹಿಂದೂ ಜಾಗರಣ ವೇದಿಕೆ ರಾಯಿ ವಲಯದ ಅಧ್ಯಕ್ಷರಾದ ಶಿವಾನಂದ ಮಾವಿನಕಟ್ಟೆ, ಹಿಂದೂ ಜಾಗರಣ ವೇದಿಕೆ ಸುವರ್ಣನಾಡು ಘಟಕದ ಅಧ್ಯಕ್ಷರಾದ ವಿಶ್ವನಾಥ ಎಮ್.ಕೆ ಅತಿಥಿಗಳಾಗಿ ಭಾಗವಹಿಸಿದ್ದರು.
Be the first to comment on "ಹಿಂಜಾವೇ ವತಿಯಿಂದ ಸುವರ್ಣನಾಡು ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ಸಭಾಭವನದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ"