ಬಂಟ್ವಾಳ: ಮನುಷ್ಯ ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮತ್ತೆ ಪ್ರಕೃತಿಯತ್ತ ಮುಖ ಮಾಡಲು ಆಟಿಯ ಆಚಾರಗಳು ಪ್ರೇರಣೆಯಾಗಲಿ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಗೋಪಾಲ ಅಂಚನ್ ಹೇಳಿದರು.
ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಲ್ ವತಿಯಿಂದ ನಡೆದ ಸರಳ ಸಮಾರಂಭದಲ್ಲಿ ಆಟಿಯ ಆಚಾರಗಳ ಮಹತ್ವ ವಿಷಯದಲ್ಲಿ ಉಪನ್ಯಾಸ ನೀಡಿದರು. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಅಷಾಡ ಮಾಸದಲ್ಲಿಕಾಲದ ಅನಿವಾರ್ಯತೆಗೆ ಮೈಯೊಡ್ಡಿ ಪ್ರಕೃತಿ ಸಹಜವಾದ ಬದುಕನ್ನು ನಡೆಸಿರುವುದೇ ಇಂದು ಆಟಿಯ ಆಚರಣೆಗಳಾಗಿ ಮಹತ್ವ ಪಡೆದಿದೆ. ಇಂತಹ ಆಚರಣೆಗಳು ಇಂದಿನ ಜನಾಂಗಕ್ಕೆ ಹಿಂದಿನ ಕಾಲದ ಬದುಕಿನ ಚಿತ್ರಣವನ್ನು ಕಟ್ಟಿಕೊಡಬೇಕು. ಪಾಸ್ಟ್ ಹಾಗೂ ಟೇಸ್ಟ್ ಫುಡ್ ಸಂಸ್ಕ್ರತಿಯಿಂದ ಹೊರಬಂದು ನಿಸರ್ಗದತ್ತವಾದ ಆಹಾರಕ್ರಮಕ್ಕೆ ಒಗ್ಗಿಕೊಳ್ಳಲು ಪ್ರೇರಣೆ ನೀಡಬೇಕು ಎಂದು ಅವರು ಹೇಳಿದರು.
ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಅಧ್ಯಕ್ಷ ರಾಘವೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಅವಿಲ್ ಮೆನೆಜಸ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ ನಾಯಕ್ ರಾಯಿ ಸ್ವಾಗತಿಸಿ, ವಂದಿಸಿದರು.
Be the first to comment on "ಪ್ರಕೃತಿಯತ್ತ ಮುಖ ಮಾಡಲು ಆಟಿ ಆಚರಣೆ ಪ್ರೇರಣೆಯಾಗಲಿ: ಗೋಪಾಲ ಅಂಚನ್"