ಮಂಗಳೂರು ಹಾಗೂ ಬಿ.ಸಿರೋಡ್ ನಲ್ಲಿ ಕಳೆದ 21 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸೆಂಟರ್ ನ ಮಾತೃಸಂಸ್ಥೆಯಾದ ಬಿಎಸ್ಎಸ್ ವತಿಯಿಂದ ಕಮಿಷನ್ ಕ್ಲಾಸ್ ಬಿಸಿರೋಡ್ ನ ಮೈಟ್ ಸಂಸ್ಥೆಯಲ್ಲಿ ನಡೆಯಿತು.
ವರ್ಷದ ಕೊನೆಯಲ್ಲಿ ನಡೆಯುವ ಪ್ರಾಯೋಗಿಕ ಪರೀಕ್ಷೆಯಾದ ಕಮಿಷನ್ ಕ್ಲಾಸ್ ನಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಟೀಚರ್ ಟ್ರೈನಿಂಗ್ ವಿದ್ಯಾರ್ಥಿಗಳು ತಯಾರಿಸಿದ ಕಲಿಕಾ ಸಾಮಾಗ್ರಿಗಳು ಹಾಗೂ ಫ್ಯಾಶನ್ ಡಿಸೈನಿಂಗ್ ಮಕ್ಕಳು ತಯಾರಿಸಿದ ಫ್ಯಾಶನ್ ಉಡುಪುಗಳ ಪ್ರದರ್ಶನವು ನಡೆಯಿತು.
ಬಿಎಸ್ಎಸ್ ಪರೀಕ್ಷಕರಾದ ಸುಷ್ಮಾ ಮನೋಜ್ ಅವರು ಮಾತನಾಡಿ, ತಾಂತ್ರಿಕ, ವೃತ್ತಿಪರ ಹಾಗೂ ಕಂಪ್ಯೂಟರ್ ಆಧಾರಿತ ಶಿಕ್ಷಣ ನೀಡುತ್ತಿರುವ ಮಂಗಳೂರು ಹಾಗೂ ಬಿಸಿರೋಡ್ ನ ಮೈಟ್ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ಬದುಕಿನ ಬೆಳಕು ನೀಡಿದೆ. ಪ್ರಸಕ್ತ ಕಾಲಘಟ್ಟದಲ್ಲಿ ಯುವಜನತೆಗೆ ವೃತ್ತಿಪರ ಕೌಶಲ್ಯವನ್ನು ನೀಡುವ ಮೂಲಕ ಮಾದರಿ ಕಾರ್ಯ ನಡೆಸುತ್ತಿದೆ ಎಂದರು.ಮೈಟ್ ಸಂಸ್ಥೆಯ ನಿರ್ದೇಶಕರಾದ ರಾಕೇಶ್ ಹಾಗೂ ನಿಶ್ಮಿತಾ ರಾಕೇಶ್, ಉಪನ್ಯಾಸಕರಾದ ಅಶ್ರಫ್, ಪ್ರತೀಕ್, ಶಿವರಾಜ್ ಶೆಟ್ಟಿ, ಸೌಜನ್ಯ ಆಚಾರ್ಯ, ಸ್ಯಾಂಡ್ರಾ ಡೇವಿಡ್ ಮುಂತಾದವರು ಉಪಸ್ಥಿತರಿದ್ದರು.
Be the first to comment on "ಮೈಟ್ ಎಜುಕೇಶನ್ ಸೆಂಟರ್ ನಲ್ಲಿ ಕಲಿಕಾ ವಸ್ತುಪ್ರದರ್ಶನ"