






ಬಂಟ್ವಾಳ ತಾಲೂಕಿನ ಒಟ್ಟು 30 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸೋಮವಾರ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶಾಲೆಗಳ ಪ್ರವೇಶದ್ವಾರದಲ್ಲೇ ಭವ್ಯ ಸ್ವಾಗತ ದೊರಕಿತು. ಕೊಠಡಿಗಳ ಕುರಿತು ಮಾಹಿತಿ, ವಿದ್ಯಾರ್ಥಿಗಳಗೆ ಅಗತ್ಯವಿರುವ ಕೋವಿಡ್ ನಿಯಮ ಪಾಲನೆಗಳ ಕುರಿತ ಅನೌನ್ಸ್ ಮೆಂಟ್ ನಡೆದರೆ, ಹಾಲ್ ಟಿಕೆಟ್ ವೀಕ್ಷಿಸಿ, ಅವರನ್ನು ಆಯಾ ಕೊಠಡಿಗಳಿಗೆ ಬಿಡುವ ವ್ಯವಸ್ಥೆಯನ್ನು ಮಾಡಲಾಯಿತು. ಬಂಟ್ವಾಳ ತಾಲೂಕಿನ ಮೊಂಟೆಪದವಿನಲ್ಲಿರುವ ಸರ್ಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಊರವರು, ಶಿಕ್ಷಕರು ಮಕ್ಕಳನ್ನು ಸ್ವಾಗತಿಸಲು ಕಾದು ನಿಂತಿದ್ದರು. ಬ್ಯಾನರ್ ಮೂಲಕ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲಾಯಿತು. ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಶಿಕ್ಷಕರನ್ನು ಅಭಿನಂದಿಸಲಾಯಿತು. ಶಾಲೆಯ ವೈಸ್ ಪ್ರಿನ್ಸಿಪಾಲ್ ಸಂತೋಷ್ ನೇತೃತ್ವದಲ್ಲಿ ಈ ಏರ್ಪಾಡನ್ನು ಮಾಡಲಾಗಿತ್ತು.

Be the first to comment on "ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ವಿದ್ಯಾರ್ಥಿಗಳ ಉತ್ಸಾಹ, ಶುಭ ಹಾರೈಸಿದ ಶಿಕ್ಷಕರು, ಪೋಷಕರು, ಕೋವಿಡ್ ನಿಯಮಗಳೊಂದಿಗೆ ಮೊದಲ ಪರೀಕ್ಷೆ ಯಶಸ್ವಿ"