






ಬಂಟ್ವಾಳದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿ ಶುಕ್ರವಾರ ಬೆಳಗಿನ ಜಾವ 6.4 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಅಪಾಯದ ಮಟ್ಟ 8.5 ಮೀಟರ್ ಆಗಿರುವುದರಿಂದ ನದಿ ಉಕ್ಕಿ ಹರಿಯುವ ಸಂಭವ ಸದ್ಯಕ್ಕಿಲ್ಲವಾದರೂ ಗುರುವಾರ ಸಂಜೆಯ ವೇಳೆ 7 ಮೀಟರ್ ಎತ್ತರದಲ್ಲಿ ಹರಿದ ಕಾರಣ ಸಂಭಾವ್ಯ ಅಪಾಯವನ್ನು ಎದುರಿಸಲು ತಾಲೂಕಾಡಳಿತವೂ ಸನ್ನದ್ಧವಾಗಿದೆ. ನದಿ ತೀರದ ಜನರು ಅನಾವಶ್ಯಕವಾಗಿ ಅಪಾಯಕ್ಕೆ ಮೈಯೊಡ್ಡುವದನ್ನು ಮಾಡದೇ ಜಾಗರೂಕರಾಗಿರುವುದೂ ಅವಶ್ಯವಾಗಿದೆ. ಇನ್ನು ಶುಕ್ರವಾರವೂ ದಟ್ಟ ಮೋಡವಿದ್ದು, ಇಡೀ ದಿನ ಮಳೆ ಸುರಿಯುವ ಎಲ್ಲಾ ಲಕ್ಷಣಗಳೂ ಕಂಡುಬಂದಿವೆ.
Be the first to comment on "ನದಿ ನೀರಿನ ಮಟ್ಟದಲ್ಲಿ ಇಳಿಕೆ, ಆದರೂ ಬೇಕು ಮುನ್ನೆಚ್ಚರಿಕೆ"