





ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ತಾಲೂಕಿನ ಹಲವು ಕಡೆಗಳಲ್ಲಿ ಮನೆ, ತೋಟಗಳಿಗೆ ಹಾನಿಯೂ ಸಂಭವಿಸಿದೆ. ಇಡ್ಕಿದು ಗ್ರಾಮದ ಏಮಾಜೆ ಎಂಬಲ್ಲಿ ಲಕ್ಷ್ಮಣ ಮೂಲ್ಯ ಎಂಬವರ ಮನೆ ಹಾನಿಗೊಂಡಿದೆ. ಬಂಟ್ವಾಳ ಮೂಡ ಗ್ರಾಮದ ಕೈಕಂಬ ಎಂಬಲ್ಲಿ ಶೈಲೇಶ್ ಎಂಬವರ ವಾಸ್ತವ್ಯದ ಮಣ್ಣಿನ ಗೋಡೆ ಹಂಚು ಛಾವಣಿ ಮನೆ ಹಾನಿಗೊಂಡಿದೆ. ಮಾಣಿ ಗ್ರಾಮದ ಪಲ್ಲತ್ತಿಲ ವಿಶ್ವನಾಥ ಎಂಬವರ ಮನೆಗೆ ಗುಡ್ಡ ಜರಿದು ಹಾನಿಯಾಗಿದೆ. ಮಂಚಿ ಗ್ರಾಮದ ಪತ್ತುಮುಡಿ ಎಂಬಲ್ಲಿ ಹಂಝ ಎಂಬವರ ಮನೆ ಆವರಣ ಗೋಡೆ ಕುಸಿದಿದೆ.
Be the first to comment on "ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ಗಾಳಿ, ಮಳೆಗೆ ಹಲವೆಡೆ ಹಾನಿ"