






ಬಂಟ್ವಾಳ: ಕೋವಿಡ್ ಸಂದರ್ಭ ತುರ್ತುಸ್ಥಿತಿಯಲ್ಲಿ ಸಹಕರಿಸಿದ ಸೇವಾಭಾರತಿ ತಂಡಕ್ಕೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಅಭಿನಂದಿಸಿ, ಗೌರವಿಸಲಾಯಿತು. ಈ ಸಂದರ್ಭ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ, ಸೇವಾಭಾರತಿ ತಂಡದ ಪ್ರಮುಖರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರೋಗಿಗಳನ್ನು ಬಂಟ್ವಾಳಕ್ಕೆ ಕರೆತರುವಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವಲ್ಲಿ ಆಸ್ಪತ್ರೆಯ ಜೊತೆಗೆ ಕೈಜೋಡಿಸುವುದರ ಜೊತೆಗೆ ಪ್ರತಿನಿತ್ಯ ಮದ್ಯಾಹ್ನ ಹಾಗೂ ರಾತ್ರಿ ಊಟದ ಅವಶ್ಯಕತೆಯನ್ನು ಪೂರೈಸುತ್ತಿದ್ದ ಸೇವಾಭಾರತಿ ಚಟುವಟಿಕೆಗಳನ್ನು ಈ ಸಂದರ್ಭ ಶ್ಲಾಘಿಸಲಾಯಿತು.

Be the first to comment on "ಸೇವಾಭಾರತಿ ತಂಡಕ್ಕೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಅಭಿನಂದನೆ"