ಬಂಟ್ವಾಳ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317 ಡಿ ಆಶ್ರಯದಲ್ಲಿ ಅರಣ್ಯ ಇಲಾಖೆ ಬಂಟ್ವಾಳ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಸಹಭಾಗಿತ್ವದಲ್ಲಿ ನಮ್ಮ ಮರ- ನಮ್ಮ ಉಸಿರು ಯೋಜನೆಯಡಿ ಬಿ.ಸಿ.ರೋಡಿನಿಂದ ಜಕ್ರಿಬೆಟ್ಟುವರೆಗೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸಾಲುಮರ ಯೋಜನೆಯನ್ವಯ ಗಿಡ ನೆಡುವ ಕಾರ್ಯಕ್ರಮಕ್ಕೆ ಶುಕ್ರವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅರಣ್ಯ ಇಲಾಖೆ ಕಚೇರಿ ಮುಂಭಾಗ ಚಾಲನೆ ನೀಡಿದರು.
ನಾವು ಆಮ್ಲಜನಕಕ್ಕಾಗಿ ಪರಿತಪಿಸುತ್ತಿದ್ದೇವೆ, ಆದರೆ ನೈಸರ್ಗಿಕವಾಗಿ, ಪ್ರಕೃತಿಯೇ ನೀಡುವ ಆಮ್ಲಜನಕವನ್ನು ನಾವು ಪಡೆಯಬೇಕು ಎಂಬ ದೃಷ್ಟಿಯಿಂದ ಗಿಡ ನೆಟ್ಟು ಅದು ಮರವಾಗಿ ನಮಗೆ ಆಸರೆಯಾಗುತ್ತದೆ, ನಮ್ಮನ್ನು ಆರೋಗ್ಯಪೂರ್ಣವನ್ನಾಗಿಸುತ್ತದೆ ಎಂದು ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿರುವ ವೇಳೆ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದಾಗ ಸೌಂದರ್ಯವೂ ಜಾಸ್ತಿ, ಆರೋಗ್ಯಕ್ಕೂ ಒಳ್ಳೆಯದು, ಇಂಥ ಕಾರ್ಯವನ್ನು ಲಯನ್ಸ್ ಸಂಸ್ಥೆ ಮಾಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಮಾತನಾಡಿ, ಲಯನ್ಸ್ ಸಹಯೋಗದೊಂದಿಗೆ ಬಿ.ಸಿ.ರೋಡ್ ನಿಂದ ಜಕ್ರಿಬೆಟ್ಟುವರೆಗೆ ಸಾವಿರ ಗಿಡ ನೆಡುವ ಯೋಜನೆ ಇದೆ ಎಂದರು.ಲಯನ್ಸ್ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಗಿಡಗಳನ್ನು ಪೋಷಿಸುವ ಕಾರ್ಯವನ್ನು ಮಾಡಲಿದ್ದೇವೆ ಎಂದರು. ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಉಪವಲಯಾರಣ್ಯಾಧಿಕಾರಿಗಳಾದ ಪ್ರೀತಮ್, ಯಶೋಧರ್, ಅನಿಲ್ ಮತ್ತು ಬಸಪ್ಪ, ಅರಣ್ಯ ರಕ್ಷಕರಾದ ಜಿತೇಶ್, ರೇಖಾ, ಲಕ್ಷ್ಮೀನಾರಾಯಣ, ದಯಾನಂದ್, ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಡಾ. ದಿವ್ಯ ವಸಂತ ಶೆಟ್ಟಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಶಶಿಧರ ಮಾರ್ಲ, ಸಂಪುಟ ಸಂಯೋಜಕ ದಾಮೋದರ ಬಿ.ಎಂ., ಗವರ್ನರ್ ಕೋ-ಆರ್ಡಿನೇಟರ್ ಮೊಹಿದೀನ್ ಕುಂಞಿ, ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಡಾ. ಬಿ. ವಸಂತ ಬಾಳಿಗಾ, ಕ್ಲಬ್ ಕಾರ್ಯದರ್ಶಿ, ಜಿಲ್ಲಾ ಇ-ಮಂಗಳ ಸಂಪಾದಕ ಧೀರಜ್ ಹೆಬ್ರಿ, ಜಿಲ್ಲಾ ಸಂಪುಟ ಉಪ ಕಾರ್ಯದರ್ಶಿಗಳಾದ ಕಾರ್ಯಕ್ರಮ ಸಂಯೋಜಕ ಲಕ್ಷ್ಮಣ ಕುಲಾಲ್ ಮತ್ತು ಗೀತಾ ಆರ್. ರಾವ್, ಜಿ.ಎಸ್.ಟಿ. ಸಂಯೋಜಕ ಕುಡ್ಪಿ ಅರವಿಂದ ಶೆಣೈ, ಜಿಲ್ಲಾ ಶಾಶ್ವತ ಯೋಜನೆಯ ಸಂಯೋಜಕ ಸತೀಶ್ ಕುಮಾರ್ ಆಳ್ವ, ಜಿಲ್ಲಾ ಪರಿಸರ ವಿಭಾಗದ ಸಂಯೋಜಕರಾದ ಮಾಧವ ಉಳ್ಳಾಲ್ ಮತ್ತು ಉಮೇಶ್ ಆಚಾರ್, ಪ್ರಾಂತೀಯ ಅಧ್ಯಕ್ಷರುಗಳಾದ ಮನೋರಂಜನ್ ಕರೈ, ಸ್ವರೂಪ ಎನ್. ಶೆಟ್ಟಿ, ವಲಯಾಧ್ಯಕ್ಷ ಎಂ. ಕೃಷ್ಣಶ್ಯಾಮ್, ಸಂಯೋಜಕರುಗಳಾದ ಬಿ.ಶಿವಾನಂದ ಬಾಳಿಗಾ, ಸಂಜೀವ ಬಿ.ಶೆಟ್ಟಿ, ದೇವಿಕಾ ದಾಮೋದರ್, ಜಿಲ್ಲಾಧ್ಯಕ್ಷರುಗಳಾದ ಜಗದೀಶ್ ಬಿ.ಎಸ್., ಆಶೀರ್ವಾದ್ ಕುಮಾರ್, ದಿಶಾ ಆಶೀರ್ವಾದ್, ಪ್ರಶಾಂತ ಕೋಟ್ಯಾನ್, ರಾಮಯ್ಯ ಶೆಟ್ಟಿ, ಹೆನ್ರಿ ಪಿರೇರಾ, ಸ್ಥಳೀಯ ಪ್ರಮುಖರಾದ ಕೇಶವ ದೈಪಲ ಮತ್ತಿತರರು ಉಪಸ್ಥಿತರಿದ್ದರು. ಲಯನ್ಸ್ ಜಿಲ್ಲಾ ಸಂಪುಟ ಕೋಶಾಧಿಕಾರಿ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಲಯನ್ಸ್ ಕ್ಲಬ್ ಬಂಟ್ವಾಳ, ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಹೆದ್ದಾರಿ ಇಕ್ಕೆಲಗಳಲ್ಲಿ ಸಾಲುಮರ ಯೋಜನೆಗೆ ಚಾಲನೆ"