




ಬಂಟ್ವಾಳ: ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಬಂಟ್ವಾಳ ಪುರಸಭೆ ವತಿಯಿಂದ ಕೋವಿಡ್ ಪರೀಕ್ಷಾ ಕಾರ್ಯಕ್ರಮ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆಯಿತು.ಆಟೊ ಪಾರ್ಕಿಂಗ್ ನಲ್ಲಿರುವ ಆಟೊ ಚಾಲಕರು, ಕಾರು ಚಾಲಕರು, ಅಂಗಡಿಗಳ ಮಾಲೀಕರು, ಕಾರ್ಮಿಕರ ತಪಾಸಣೆಯನ್ನು ಮಾಡಲಾಯಿತು. ಒಟ್ಟು 200ಕ್ಕೂ ಅಧಿಕ ಮಂದಿಯ ತಪಾಸಣೆ ನಡೆದ್ದಿದ್ದು, ಇಬ್ಬರಿಗೆ ಪಾಸಿಟಿವ್ ಬಂದಿದೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತೇಜೋಮೂರ್ತಿ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಆರೋಗ್ಯ ನಿರೀಕ್ಷಕ ಜಯಶಂಕರ್ ಪ್ರಸಾದ್, ಕಂದಾಯ ನಿರೀಕ್ಷಕ ಪುರುಷೋತ್ತಮ್, ಕಿರಿಯ ಅಭಿಯಂತರ ಡೊಮಿನಿಕ್ ಡಿಮೆಲ್ಲೊ, ಕಿರಿಯ ಅಭಿಯಂತರ ಸಹಾಯಕ ಇಕ್ಬಾಲ್ ಪರ್ಲಿಯಾ, ಪುರಸಭೆಯ ಪ್ರಥಮ ದರ್ಜೆ ಸಹಾಯಕರಾದ ರಝಾಕ್, ಬಿಲ್ ಕಲೆಕ್ಟರ್ ರಾಘವೇಂದ್ರ, ಸಿಬ್ಬಂದಿ ಜಯಲಕ್ಷ್ಮಿ, ಬಂಟ್ವಾಳ ಸಂಚಾರಿ ಆರೋಗ್ಯ ಕೇಂದ್ರದ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಪುರಸಭೆಯಿಂದ ಜಾಗೃತಿ ಸಂದೇಶಗಳನ್ನು ಬಿತ್ತರಿಸಲಾಯಿತು.

Be the first to comment on "ಬಂಟ್ವಾಳ ಪುರಸಭೆ ವತಿಯಿಂದ ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್ ತಪಾಸಣೆ"