



ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿ ವಲಯ ಎಸ್.ಡಿ.ಪಿ.ಐ. ವತಿಯಿಂದ ಸ್ಥಾಪನಾ ದಿನಾಚರಣೆ ಕೊಡಾಜೆ ಜಂಕ್ಷನ್ ನಲ್ಲಿ ನಡೆಯಿತು. ಸ್ಥಳೀಯ ಮುಖಂಡರಾದ ಲತೀಫ್ ಕೊಡಾಜೆ ದ್ವಜಾರೋಹಣಗೈದರು, ಕಾರ್ಯಕ್ರಮವನ್ನುದ್ದೇಶಿಸಿ ವಲಯ ಕಾರ್ಯದರ್ಶಿ ಸಮಾದ್ ಮಾತನಾಡಿದರು. ಈ ಸಂಧರ್ಭದಲ್ಲಿ ಸ್ಥಳೀಯ ಮುಖಂಡರಾದ ಸಿದ್ದೀಖ್ ಕೊಡಾಜೆ, ಇರ್ಫಾನ್ ಬುಡೋಳಿ, ಸಿದ್ದೀಖ್ ಸೂರಿಕುಮೇರ್, ಶಾಫಿ ಸೂರಿಕುಮೇರ್, ಮುಜೀಬ್ ಮೊದಲಾದವರು ಉಪಸ್ಥಿತರಿದ್ದರು. ಸಿದ್ದೀಖ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Be the first to comment on "ಬಂಟ್ವಾಳ ತಾಲೂಕಿನ ಮಾಣಿ ವಲಯದ ಎಸ್.ಡಿ.ಪಿ.ಐ. ವತಿಯಿಂದ ಸ್ಥಾಪನಾ ದಿನಾಚರಣೆ"