ಬಂಟ್ವಾಳ: ಕಡೇಶಿವಾಲಯದಲ್ಲಿ ಜೇಸಿಐ ಜೋಡುಮಾರ್ಗ ನೇತ್ರಾವತಿ, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ. ಬಾಳ್ತಿಲ, ಕಡೇಶಿವಾಲಯ ಗ್ರಾಮ ಪಂಚಾಯತ್, ದ.ಕ.ಪ್ರಾಥಮಿಕ ಶಾಲೆ ಪೆರ್ಲಾಪು ಮತ್ತು ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ , ಆಟೋ ಚಾಲಕ ಮಾಲಕರಿಗೆ ಕೊರೋನಾ ಜಾಗೃತಿ ಸಭೆ ನಡೆಯಿತು.
ವೈದ್ಯಾಧಿಕಾರಿ, ಡಾ.ರಾಜೇಶ್ ಪೂಜಾರಿ ಕೊರೋನ ಮಾಹಿತಿ ನೀಡಿ ಜನರೊಂದಿಗೆ ತಕ್ಷಣ ಸ್ಪಂದಿಸುವವರು ಆಟೋದವರು ಹಾಗಾಗಿ ಯಾವ ರೀತಿಯಲ್ಲಿ ಕೊರೋನಾದ ವಿರುದ್ಧ ಹೋರಾಡಬಹುದು, ಯಾವ ರೀತಿಯಲ್ಲಿ ಮುನ್ನಚ್ಚರಿಕೆ ವಹಿಸಬೇಕು. ಕೊರೋನಾ ದಿಂದ ನಮ್ಮನ್ನು ಹೇಗೆ ಸಂರಕ್ಷಿಸಿ ಕೊಳ್ಳಬಹುದು ಎಂಬುದರ ಮಾಹಿತಿ ನೀಡಿದರು.
ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಯ ಸಂಸ್ಥಾಪಕರು, ಜೇಸಿಐ ಅಧ್ಯಕ್ಷರು, ವಕೀಲರಾದ ಶೈಲಜಾ ರಾಜೇಶ್ ಮಾತನಾಡಿ, ಕಾನೂನು ಅನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೊರೋನಾ ವಿರುದ್ಧ ಹೋರಾಡಲು ಸಲಹೆ ನೀಡಿದರು.
ಪಂಚಾಯತ್ ಅಧ್ಯಕ್ಷರಾದ ಸುರೇಶ್ ಶೆಟ್ಟಿಗಾರ್, ಉಪಾಧ್ಯಕ್ಷರಾದ, ಜಯ ಆರ್ ದೇವಾಡಿಗ, ದೈಹಿಕ ಶಿಕ್ಷಕ ಭಾಸ್ಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ, ಪಂಚಾಯತ್ ಕಾರ್ಯದರ್ಶಿ ಸಂಜೀವ ನಾಯ್ಕ , ಆರೋಗ್ಯ ಇಲಾಖೆಯ ನರ್ಸ್ ಲೀಲಾವತಿ, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.
Be the first to comment on "ಆಟೊ ಚಾಲಕ, ಮಾಲೀಕರಿಗೆ ಕಡೇಶಿವಾಲಯದಲ್ಲಿ ಕೊರೊನಾ ಜಾಗೃತಿ ಸಭೆ"