ನಿಂತಿಲ್ಲ ಕೊರೊನಾ, ಜಿಲ್ಲೆಯಲ್ಲಿ ಸ್ವಯಂನಿಯಂತ್ರಣ ಅಗತ್ಯ
ಮಂಗಳೂರು: ನನಗೆ ಏನೂ ಆಗುವುದಿಲ್ಲ ಎಂಬ ಬಲವಾದ ನಂಬಿಕೆ ಹೊತ್ತು ಮಾಸ್ಕ್ ಹಾಕದೆ ನಿಲ್ಲುವುದು, ಮಾಸ್ಕ್ ಹಾಕದೆ ವ್ಯವಹರಿಸುವುದು, ಮಾಸ್ಕ್ ಹಾಕದೆ ಯಾವುದೇ ಜಾಗ್ರತೆಯನ್ನು ಮಾಡಿಕೊಳ್ಳದೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು, ಏನೂ ಆಗುವುದಿಲ್ಲ ಎಂದುಕೊಳ್ಳುತ್ತಾ ಊರೂರು ತಿರುಗಾಡುವವರ ಗಮನಕ್ಕೆ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದ ವರದಿಯಲ್ಲಿ ಒಟ್ಟು 1006 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ರೇಟ್ ಶೇ.10.07 ಆಗಿದೆ. ಒಟ್ಟು 665 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಸೋಂಕು ತಗಲಿದ 15 ಮಂದಿ ಸಾವನ್ನಪ್ಪಿದ್ದಾರೆ. ಬಂಟ್ವಾಳ ತಾಲೂಕೊಂದರಲ್ಲೇ *ಬಂಟ್ವಾಳ ತಾಲೂಕಿನಲ್ಲಿ ಹೊಸದಾಗಿ 243 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಸೀಲ್ ಡೌನ್ ಆಗಿರುವ ವಾಮದಪದವು ಪರಿಸರದಲ್ಲೂ ಕಡಿಮೆ ಆಗಿಲ್ಲ. ಎಚ್ಚರ ವಹಿಸದಿದ್ದರೆ, ನಿಮಗಷ್ಟೇ ಅಲ್ಲ, ಎಲ್ಲರಿಗೂ ತೊಂದರೆ.
Be the first to comment on "ದಕ್ಷಿಣ ಕನ್ನಡದಲ್ಲಿ ಮತ್ತೆ ಒಂದೇ ದಿನ ಸಾವಿರ ದಾಟಿದ ಕೊರೊನಾ ಕೇಸ್, 15 ಮಂದಿ ಸಾವು"