



ಬಂಟ್ವಾಳ: ಶುಕ್ರವಾರ ಮಳೆ ಕಡಿಮೆಯಾಗಿದ್ದರೂ ಬಂಟ್ವಾಳ ತಾಲೂಕಿನಲ್ಲಿ ಮಳೆಹಾನಿ ಪ್ರಕರಣಗಳು ಕಡಿಮೆಯಾಗಿಲ್ಲ. ಕೆಲವೆಡೆ ಬಲವಾದ ಗಾಳಿ ಬೀಸಿದ ಪರಿಣಾಮ ಹಾನಿಗಳು ಸಂಭವಿಸಿವೆ. ಗೂಡಿನಬಳಿಯ ಆಸಿಯಮ್ಮ ಮನೆ, ಸಜಿಪನಡು ಗ್ರಾಮದ ಉಮಾವತಿ ಮನೆಯ ಮೇಲ್ಛಾವಣಿಗೆ ಹಾನಿ ಸಂಭವಿಸಿದೆ. ಪೆರಾಜೆ ಗ್ರಾಮದ ವಿಶ್ವನಾಥ ಮೂಲ್ಯ ಅವರ ಹಳೆಯ ವಾಸ್ತವ್ಯ ಇಲ್ಲದ ಮನೆ ಪೂರ್ತಿ ಬಿದ್ದಿರುತ್ತದೆ. ಇರಾ ಗ್ರಾಮದ ಕಾಪಿಕಾಡು ಅಂಗನವಾಡಿ ಕೇಂದ್ರದ ಮಾಡು ಬಿದ್ದು ಕಟ್ಟಡಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದಲ್ಲಿ ಮನೆಯೊಂದು ಹಾನಿಯಾಗಿದೆ. ಸಜಿಪನಡು ಗ್ರಾಮದ ಇಸ್ಮಾಯಿಲ್ ಮನೆಗೆ ಮರ ಬಿದ್ದು ಹಾನಿಯಾಗಿದೆ. ಪಟ್ಲಕೋಡಿ ನಿವಾಸಿ ರಘುನಾಥ ನಾಯ್ಕ, ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿರುತ್ತದೆ. ಮನೆಯ ಸದಸ್ಯರಿಗೆ ಯಾವುದೇ ಪ್ರಾಣ ಅಪಾಯ ಆಗಿರುವುದಿಲ್ಲ. ಮನೆಯ ಸದಸ್ಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
Be the first to comment on "ಶುಕ್ರವಾರ ತಗ್ಗಿದ ಮಳೆಯಬ್ಬರ, ಆದರೂ ಹಲವೆಡೆ ಹಾನಿ"