ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಬಳಿ ಹೆದ್ದಾರಿಯ ಕ್ರಾಸಿಂಗ್ ಅನ್ನು ಮುಚ್ಚಿದ ವಿಚಾರದ ಹಿನ್ನೆಲೆಯಲ್ಲಿ ಕಳ್ಳಿಗೆ ಗ್ರಾಪಂ ನಿಯೋಗ ಸ್ಥಳಕ್ಕೆ ತೆರಳಿ ಆಕ್ಷೇಪ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಚತುಷ್ಪಥ ಕೆಲಸ ಅರ್ಧಕ್ಕೆ ಬಾಕಿಯಾಗಿದೆ. ಕೊಟ್ಟ ಭರವಸೆಯಂತೆ ಅಂಡರ್ ಪಾಸ್ ನಿರ್ಮಿಸಿಕೊಟ್ಟಿಲ್ಲ. ಅಪಘಾತ ವಲಯದಲ್ಲಿ ಸಂಚಾರಕ್ಕೆ ಅನುವುಮಾಡಿಕೊಟ್ಟು, ಇಲ್ಲಿ ಮತ್ತೆ ಕ್ರಾಸಿಂಗ್ ತಡೆ ಮಾಡುವುದು ಸರಿಯಲ್ಲ ಎಂಬುದನ್ನು ಗ್ರಾಪಂ ನಿಯೋಗ ಗ್ರಾಪಂ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ ನೇತೃತ್ವದಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿತು. ಬಳಿಕ ಬಂಟ್ವಾಳ ಶಾಸಕರನ್ನು ಭೇಟಿಮಾಡಿದ ನಿಯೋಗ ಸಮಸ್ಯೆ ಬಗ್ಗೆ ಶಾಸಕರ ಗಮನಸೆಳೆದರು. ಪಂಚಾಯತ್ ಸದಸ್ಯ ಮನೋಜ್ ವಳವೂರು, ಸತೀಶ್ ಬ್ರಹ್ಮರಕೂಟ್ಲು, ಮನೋಹರ ಕಂಜತ್ತೂರು ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ಬಳಿ ಕ್ರಾಸಿಂಗ್ ಗೆ ತಡೆ – ಗ್ರಾಪಂ ಆಕ್ಷೇಪ ಬಳಿಕ ಅಧಿಕಾರಿಗಳ ಭೇಟಿ"