



ಬಂಟ್ವಾಳ: ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡ ಬಳಿಕ ದೊರೆತ ಮೊದಲ ಗೌರವಧನವನ್ನು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರ ಸಹಿತ ಆರು ಮಂದಿ ಸದಸ್ಯರು ಸೇವಾಭಾರತಿ ಬಂಟ್ವಾಳ ಘಟಕವು ಕೊರೋನ ಸಂಕಷ್ಟಕಾಲದಲ್ಲಿ ನಡೆಸುತ್ತಿರುವ ಸೇವಾಕಾರ್ಯಕ್ಕೆ ಸಮರ್ಪಿಸುವ ಮೂಲಕ ತಮ್ಮ ಅಳಿಲ ಸೇವೆಯನ್ನು ಮಾಡಿದ್ದಾರೆ. ನರಿಕೊಂಬು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಪ್ರಕಾಶ್ ,ಸದಸ್ಯರಾದ ಯೋಗೀಶ್,ಸಂತೋಷ್ ಕುಮಾರ್,ಹೇಮಲತಾ, ಸುಜಾತ,ಸವಿತಾ ನರಿಕೊಂಬುಗ್ರಾಮ ಪಂಚಾಯತ್ ನ ಶಂಭೂರು ಗ್ರಾಮದ ವ್ಯಾಪ್ತಿಗೊಳಪಟ್ಟ ಈ ಆರು ಮಂದಿ ಸದಸ್ಯರು ತಮಗೆ ದೊರೆತ ಮೊದಲ ಗೌರವಧನ್ನು ಒಟ್ಟು 7,525 ಸಾ.ರೂ.ವನ್ನು ಸೇವಾಭಾರತಿ ಕಾರ್ಯಾಲಯದಕ್ಕೆ ಹಸ್ತಾಂತರಿಸಿದ್ದಾರೆ. ಸಹಕಾರಿಸಂಘದಿಂದಲುನೆರವು: ಆದೇರೀತಿ ತಾಲೂಕಿನ ವಿವಿಧ ಸಹಕಾರಿಸಂಘದ ಆಡಳಿತ ಮಂಡಳಿಯು ಸೇವಾ ಭಾರತಿಯ ನಿಧಿಗೆ ಧನಸಹಾಯದ ನೆರವನ್ನು ಒದಗಿಸಿದೆ.ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ,ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ಹಾಗೂ ಫರಂಗೀಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಕಡೇಶಿವಾಲಯ ವ್ಯವಸಾಯಿಕ ಸೇವಾ ಸಹಕಾರಿ ಸಂಘ ತಲಾ 10 ಸಾ.ರೂ.ವಿನಂತೆ ಸೇವಾ ಭಾರತಿಯ ಸೇವಾ ಚಟುವಟಿಕೆಗೆ ನೆರವು ನೀಡಿದೆ. ಈ ಸಂದರ್ಭ ಸೇವಾ ಭಾರತಿ ಪ್ರಮುಖರಾದ ಕೊಡ್ಮಣ್ ಕಾಂತಪ್ಪ ಶೆಟ್ಟಿ, ಪ್ರಶಾಂತ್ ಕೆಂಪುಗುಡ್ಡೆ,ಜಗದೀಶ್ ಕಲ್ಲಡ್ಕ, ವಿನೋದ್ ಕುಮಾರ್ ಕೊಡ್ಮಾಣ್,ಸುರೇಶ್ ಬೆಂಜನಪದವು, ತಿರುಲೇಶ್ ಬೆಳ್ಳೂರು,ಚಂದ್ರ ಕುಲಾಲ್,ಕಮಾಲಾಕ್ಷ, ತಾಪಂ ಮಾಜಿ ಉಪಾಧ್ಯಕ್ಷ ಆನಂದ ಎ.ಶಂಭೂರು, ನರಿಕೊಂಬು ಗ್ರಾಮದ ಬಿಜೆಪಿ ಬೂತ್ ಸಮಿತಿಯ ಕೇಶವ,ದಿನೇಶ್ ಮೊದಲಾದವರು ಹಾಜರಿದ್ದರು.
Be the first to comment on "ಮೊದಲ ಗೌರವಧನ ಸೇವಾಭಾರತಿಗೆ ಸಮರ್ಪಿಸಿದ ನರಿಕೊಂಬು ಗ್ರಾಪಂ ಉಪಾಧ್ಯಕ್ಷ ಸಹಿತ ಆರು ಮಂದಿ ಸದಸ್ಯರು"