ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕೈಗೊಳ್ಳುತ್ತಿರುವ ಕಾರ್ಯಗಳ ಕುರಿತು ರಾಜ್ಯದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಾ. ಅಶ್ವತ್ಥನಾರಾಯಣ ಅವರ ಕಚೇರಿಯಲ್ಲಿ ಅವರನ್ನು ಭೇಟಿಯಾದ ಶಾಸಕರು, ತಾಲೂಕಿನ ಕೋವಿಡ್ ಸ್ಥಿತಿ, ಕೈಗೊಳ್ಳಲಾದ ಕಾರ್ಯಪಡೆಯ ಸಭೆಗಳು ಹಾಗೂ ಕ್ರಮಗಳ ಕುರಿತು ಮಾಹಿತಿ ನೀಡಿದರು. ಕೊರೊನಾ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಿರ್ಮಾಣವಾದ ಜಿಲ್ಲೆಯಲ್ಲೇ ಪ್ರಥಮವಾದ ಆಕ್ಸಿಜನ್ ಘಟಕ ಮತ್ತು ಬಂಟ್ವಾಳ ಆಸ್ಪತ್ರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಘಟಕದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಶಾಸಕರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೋವಿಡ್ ಮುಕ್ತ ಬಂಟ್ವಾಳವಾಗಲಿ ಎಂದು ಹಾರೈಸಿದರು. ಶಾಸಕರ ಜೊತೆಗೆ ಬುಡ ಅಧ್ಯಕ್ಷ ದೇವದಾಸ ಶೆಟ್ಟಿ, ಆಪ್ತ ಸಹಾಯಕ ಪವನ್ ಕುಮಾರ್ ಶೆಟ್ಟಿ ಜತೆಗಿದ್ದರು.
Be the first to comment on "ಬಂಟ್ವಾಳ ಶಾಸಕರ ಕಾರ್ಯವೈಖರಿಗೆ ಉಪಮುಖ್ಯಮಂತ್ರಿ ಮೆಚ್ಚುಗೆ"