ಬಂಟ್ವಾಳ: ಬಂಟ್ವಾಳ ಪುರಸಭೆಯ ವಾರ್ಡ್ ನಂ. 14ರ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸಭೆ ವಾರ್ಡ್ ಸದಸ್ಯೆ ಹಾಗೂ ಕಾರ್ಯಪಡೆ ಅಧ್ಯಕ್ಷೆ ಝೀನತ್ ಫಿರೋಜ್ ಅಧ್ಯಕ್ಷತೆಯಲ್ಲಿ ಮಂಗಳವಾರ ಕೈಕುಂಜೆಯ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಕೈಕುಂಜೆ, ಗೂಡಿನಬಳಿಯ ಕೆಲ ಪ್ರದೇಶಗಳನ್ನು ಒಳಗೊಂಡಿರುವ ಈ ವಾರ್ಡ್ ನಲ್ಲಿ ಕೊರೊನಾ ಕಾರ್ಯಪಡೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕೋವಿಡ್ ಕುರಿತು ಇರುವ ಸರ್ಕಾರದ ನಿಯಮಾವಳಿಗಳ ಕುರಿತು ಬಂಟ್ವಾಳ ಪುರಸಭೆ ಆರೋಗ್ಯ ನಿರೀಕ್ಷಕ ಜಯಶಂಕರ್ ಪ್ರಸಾದ್ ಮಾಹಿತಿ ನೀಡಿದರು. ಈ ಸಂದರ್ಭ ವಾರ್ಡ್ ನಲ್ಲಿ ಪ್ರಸ್ತುತ ನಾಲ್ಕು ಸಕ್ರಿಯ ಪ್ರಕರಣಗಳಿದ್ದು, ಎಲ್ಲವೂ ಗುಣಮುಖವಾಗುವ ಹಂತದಲ್ಲಿದೆ ಎಂಬ ಮಾಹಿತಿ ನೀಡಲಾಯಿತು. ಪುರಸಭೆಯ ಕಂದಾಯ ನಿರೀಕ್ಷಕ ಪುರುಷೋತ್ತಮ ಪುರಸಭೆ ಕೈಗೊಳ್ಳುವ ಕಾರ್ಯಗಳ ಮಾಹಿತಿ ನೀಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಗುಣವತಿ ಇಲಾಖೆಯ ಮಾಹಿತಿ ನೀಡಿದರು.
ಈ ಸಂದರ್ಭ ಪುರಸಭೆ ಮಾಜಿ ಉಪಾಧ್ಯಕ್ಷ ಇಕ್ಬಾಲ್ ಗೂಡಿನಬಳಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸೌಮ್ಯಾ, ಆಶಾ ಕಾರ್ಯಕರ್ತೆ ಮೀನಾಕ್ಷಿ, ಅಂಗನವಾಡಿ ಕಾರ್ಯಕರ್ತೆ ಶ್ರೀವಾಣಿ, ಅಂಗನವಾಡಿ ಸಹಾಯಕಿ ಸವಿತಾ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಪವಿತ್ರಾ, ಪ್ರಮುಖರಾದ ಲೋಕೇಶ್ ಸುವರ್ಣ ಅಲೆತ್ತೂರು, ಫಿರೋಜ್ ಖಾನ್ ಗೂಡಿನಬಳಿ, ಸಫೀವುಲ್ಲಾ, ಮೊಹಮ್ಮದ್ ಝಬ್ರುಲ್ಲಾ, ರಮೀಝ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ಪುರಸಭೆ ವಾರ್ಡ್ 14ರ ಕೋವಿಡ್ ಕಾರ್ಯಪಡೆ ಸಭೆ"