ಬಂಟ್ವಾಳ: ಕರ್ನಾಟಕದ ಎಲ್ಲ ಕಾಂಗ್ರೆಸ್ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ದೊರಕುವ ಅನುದಾನ ಸಹಿತ ಸಾರ್ವಜನಿಕ ದಾನಿಗಳ ನೆರವಿನಿಂದ 100 ಕೋಟಿ ರೂ ಕೊರೊನಾ ಲಸಿಕೆ ಪಡೆಯಲು ಬಳಸಲು ಅನುಮತಿಗೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ರಾಜ್ಯ ಸರ್ಕಾರ ಇದುವರೆಗೂ ಮಂಜೂರಾತಿ ನೀಡಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರದ ತಪ್ಪು ನೀತಿಗಳಿಂದಾಗಿ ಕೊರೊನಾ ಉಲ್ಬಣಗೊಂಡಿದ್ದು, ಒಂದು ಹಂತದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು. ಲಸಿಕೆ ನೀಡುವಲ್ಲೂ ಸರ್ಕಾರ ಎಡವಿದ್ದು, ವಿಳಂಬಕ್ಕೆ ಕಾಂಗ್ರೆಸ್ ಅನ್ನು ದೂರಿತು, ಸಂಕಷ್ಟದ ಕಾಲದಲ್ಲಿ ಡೀಸೆಲ್, ಪೆಟ್ರೋಲ್ ಬೆಲೆ ಏರಿದ್ದು, ಜನರಿಗೆ ದೊಡ್ಡ ಹೊಡೆತ ನೀಡಿದೆ ಎಂದು ಆಪಾದಿಸಿದರು.
ತಾನು ಶಾಸಕ, ಸಚಿವನಾಗಿದ್ದಾಗ ಒಂದೇ ವರ್ಷದಲ್ಲಿ 22 ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಿದ ವಿಷಯ ಪ್ರಸ್ತಾಪಿಸಿದ ರೈ, ಬಂಟ್ವಾಳದಲ್ಲೂ ತನ್ನ ಅವಧಿಯಲ್ಲಿ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗಿವೆ, ಆದರೆ ಅದರ ಅರಿವಿಲ್ಲದವರು ಅಪಪ್ರಚಾರ ಮಾಡುತ್ತಿದ್ದಾರೆ, ಕಾರ್ಮಿಕರಿಗೆ ಕಳೆದ ವರ್ಷದ್ದೇ ನೆರವು ಬಂದಿಲ್ಲ, ಪ್ರಾಕೃತಿಕ ವಿಕೋಪದಿಂದ ಮನೆ ಸಂಪೂರ್ಣ ನಾಶವಾದರೆ ಕೊಡುವ 5 ಲಕ್ಷ ರೂ ಇನ್ನೂ ದೊರಕಿಲ್ಲ ಎಂದು ರೈ ಹೇಳಿದರು. ರದ್ದು ಮಾಡಿರುವ ಬಿಪಿಎಲ್ ಅನ್ನು ವಾಪಸ್ ಕೊಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ ರೈ, ಜಿಲ್ಲೆಯಲ್ಲಿ ಸುಮಾರು 40ಕ್ಕೂ ಮಿಕ್ಕಿ ಕೊರೊನಾ ಪೀಡಿತ ಮೃತಪಟ್ಟವರ ಶವಸಂಸ್ಕಾರ, ಹಸಿದವರಿಗೆ ಆಹಾರವನ್ನು ಯಾವುದೇ ಜಾತಿ, ಮತ ಬೇಧವಿಲ್ಲದೆ ಮಾಡಿದ್ದೇವೆ. ಕಾಂಗ್ರೆಸ್ ಯುವ, ಮಹಿಳೆ, ಅಲ್ಪಸಂಖ್ಯಾತ ಘಟಕಗಳ ಸಹಿತ ಎಲ್ಲ ಘಟಕಗಳಿಂದಲೂ ಕೊರೊನಾ ಹಿನ್ನೆಲೆಯಲ್ಲಿ ಜನಸೇವೆ ಮಾಡಲಾಗುತ್ತಿದೆ. ಊಟಕ್ಕಿಲ್ಲದವರಿಗೆ ಆಹಾರ ಕಿಟ್ ನೀಡುವ ಕಾರ್ಯ ಆಗುತ್ತಿದ್ದು, ಇದನ್ನೆಲ್ಲ ಎಐಸಿಸಿ ನಿರ್ದೇಶನದನ್ವಯ ಮಾಡಲಾಗುತ್ತಿದೆ ಎಂದರು.
ಬಾಬಾ ರಾಮ್ ದೇವ್ ಸಹಿತ ಬಿಜೆಪಿ ಕೆಲ ಮುಖಂಡರ ಹೇಳಿಕೆಗಳಲ್ಲಿ ವಾಕ್ಸೀನ್ ಕುರಿತು ನಂಬಿಕೆ ಅವರಲ್ಲಿಲ್ಲ ಎಂಬುದು ಗೊತ್ತಾಗುತ್ತದೆ. ಕೇಂದ್ರ ಸರ್ಕಾರ ವಾಕ್ಸೀನ್ ಒದಗಿಸಲು ವಿಫಲವಾಗಿದೆ, ಕಾಂಗ್ರೆಸ್ ಘೋಷಣೆಯಷ್ಟೇ ಅಲ್ಲ, ಅನುಷ್ಠಾನಕ್ಕೆ ತಂದ ಯೋಜನೆಗಳು ಬಡವರಿಗೆ ಅನುಕೂಲ ಆಗಿದೆ.ಎಂದರು. ಇಂದಿರಾ ಕ್ಷೇಮನಿಧಿ ಮೂಲಕ ಕೊರೊನಾ ಬಾಧಿತ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಇದು ಶಾಶ್ವತ ಕಾರ್ಯಕ್ರಮ, ಬಿಪಿಎಲ್ ಕಾರ್ಡ್ ಮತ್ತೆ ಎಲ್ಲರಿಗೂ ಸಿಗಬೇಕು ಎಂದರು. ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಜೊತೆಗಿದ್ದರು. ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಪದ್ಮಶೇಖರ ಜೈನ್ ,ಎಂ.,ಎಸ್. ಮಹಮ್ಮದ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಬಂಟ್ವಾಳ ಪುರಸಭಾಧ್ಯಕ್ಷ ಮೊಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಲ್ಬರ್ಟ್ ಮೆನೀಜಸ್, ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲ್, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರಾ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಪದ್ಮನಾಭ ರೈ, ಬಂಟ್ವಾಳ ಪುರಸಭಾ ಸದಸ್ಯರಾದ ಜನಾರ್ದನ ಚಂಡ್ತಿಮಾರ್, ಗಂಗಾಧರ, ಸಿದ್ಧೀಕ್ ಗುಡ್ಡೆಯಂಗಡಿ, ಬಂಟ್ವಾಳ ಕ್ಷೇತ್ರ ಸಾಮಾಜಿಕ ಜಾಲತಾಣ ಪ್ರಮುಖರಾದ ಉಮ್ಮರ್ ಕುಂಞ ಸಾಲೆತ್ತೂರು, ಪ್ರಮುಖರಾದ ವೆಂಕಪ್ಪ ಪೂಜಾರಿ, ಸಿದ್ದೀಕ್ ಸರವು, ಪ್ರಶಾಂತ್ ಕುಲಾಲ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು,
Be the first to comment on "ಅನುದಾನ ಬಳಕೆಯ ಕಾಂಗ್ರೆಸ್ ಮನವಿಗೆ ರಾಜ್ಯ ಸರ್ಕಾರದಿಂದ ಸ್ಪಂದನೆ ಇಲ್ಲ: ರಮಾನಾಥ ರೈ ಆರೋಪ"