ಬಂಟ್ವಾಳ: ಬಾನು ದಿಟ್ಟಿಸುವ ಬಂಟ್ವಾಳದ ಜನರಿಗೆ ಆಗಸದಲ್ಲಿ ಭಾನುವಾರ ಸೂರ್ಯನ ವರ್ಣದುಂಗುರ ಬೆಳಗಿನ ಹೊತ್ತಿಗೆ ಕಂಡುಬಂತು. ಬೆಳಗ್ಗೆ 11.32ರ ವೇಳೆ ಬಂಟ್ವಾಳ ನಿವಾಸಿ ನಿಶ್ಚಿತ್ ಇದನ್ನು ಮೊಬೈಲ್ ನಲ್ಲೇ ಸೆರೆಹಿಡಿದಿದ್ದಾರೆ. Sun Halo ಎಂದು ಆಂಗ್ಲ ಭಾಷೆಯಲ್ಲಿ ಇದನ್ನು ಹೇಳುತ್ತಾರೆ. ಹಿಮದ ಕಣಗಳ ಮೂಲಕ ಬೆಳಕಿನ ವಕ್ರೀಭವನ ಪ್ರತಿಫಲನಗೊಂಡು ಸೂರ್ಯನ ಪ್ರಭಾವಲಯ ಉಂಟಾಗುವ ಪ್ರಕ್ರಿಯೆ ಇದು. 22 ಡಿಗ್ರಿಯಾಕಾರಕ್ಕೆ ವಾಲಿ ವೃತ್ತಾಕಾರ ತಾಳುವ ಈ ಪ್ರಕ್ರಿಯೆಯ ಸಂದರ್ಭ ಈ ತೆಳುವಾದ ಷಟ್ ಭುಜಾಕೃತಿಯ ಐಸ್ ಹರಳುಗಳ ಪದರಕ್ಕೆ ಬೆಳಕು ಹಾದುಹೋಗುವಾಗ ಸುಂದರವಾದ ರೂಪ ತಾಳುತ್ತದೆ.
Be the first to comment on "ಬಂಟ್ವಾಳದಲ್ಲಿ ಕಂಡುಬಂದ ಸೂರ್ಯನ ವರ್ಣದುಂಗುರ"