



ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶನಿವಾರ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಎರಡು ಪ್ರಾಣವಾಯು ಯಂತ್ರ ಮತ್ತು ನೂರು ಬೆಡ್ ಶೀಟ್ ಅನ್ನು ಒದಗಿಸಲಾಯಿತು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶೀರ್ವಾದ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಯೋಜನೆ ವತಿಯಿಂದ ಈ ಕೊಡುಗೆಯನ್ನು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ ಅವರಿಗೆ ತಹಸೀಲ್ದಾರ್ ರಶ್ಮಿ ಎಸ್.ಆರ್ ಉಪಸ್ಥಿತಿಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹಸ್ತಾಂತರಿಸಿದರು. ಯೋಜನಾಧಿಕಾರಿ ಜಯಾನಂದ ಪಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ, ಜನ ಜಾಗೃತಿ ವೇದಿಕೆ ಬಿಸಿರೋಡ್ ವಲಯದ ಅಧ್ಯಕ್ಷ ರೊನಾಲ್ಡ್ ಡಿಸೋಜ, ಎಂಎಲ್ ಎಸ್ ಯೋಜನಾಧಿಕಾರಿ ಮಹಾಂತೇಶ್, ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸ್ವಪ್ನ, ಬಂಟ್ವಾಳ ಮೇಲ್ವಿಚಾರಕರಾದ ಕೇಶವ ಕೆ, ಬಿಸಿರೋಡ್ ಮೇಲ್ವಿಚಾರಕರಾದ ಗೋಪಾಲ್, ಬಿಸಿರೋಡ್ ವಲಯದ ಅಧ್ಯಕ್ಷರಾದ ಶೇಖರ ಸಾಮಾನಿ, ಬಂಟ್ವಾಳ ವಲಯದ ಅಧ್ಯಕ್ಷರಾದ ವಸಂತ ಮೂಲ್ಯ, ಸದಾನಂದ, ಸತ್ಯಪ್ರಸಾದ್ ಉಪಸ್ಥಿತರಿದ್ದರು
Be the first to comment on "ಬಂಟ್ವಾಳದಲ್ಲಿ ಧರ್ಮಸ್ಥಳ ಯೋಜನೆಯಿಂದ ಪ್ರಾಣವಾಯು ಯಂತ್ರ, ನೂರು ಹಾಸುಹೊದಿಕೆ ವಿತರಣೆ"