ಬಂಟ್ವಾಳ: ಅತ್ಯಾಧುನಿಕ ಸೌಲಭ್ಯದ ಐದು ಬೆಡ್, 25 ಆಕ್ಸಿಜನ್ ಸಿಲಿಂಡರ್, ಹೀಗೆ ತನ್ನ ಸ್ವಂತ ನೆಲೆಯಲ್ಲಿ ಒಟ್ಟು 10 ಲಕ್ಷ ರೂ ಮೌಲ್ಯದ ಸೌಲಭ್ಯಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಬುಧವಾರ ಹಸ್ತಾಂತರಿಸಿದರು.
ಐಸಿಯು ರೋಗಿಗಳಿಗೆ ಅತ್ಯಂತ ಉಪಯುಕ್ತವಾಗುವ ಜನಕ್ ಬ್ರಾಂಡ್ ನ ಬೆಡ್ ನಲ್ಲಿ ಐದು ವಿಶೇಷ ಸೌಕರ್ಯಗಳಿವೆ. ದುಬಾರಿ ಮೊತ್ತದ ಈ ಬೆಡ್ ಗಳನ್ನು ಶಾಸಕರು ವೈಯಕ್ತಿಕ ನೆಲೆಯಲ್ಲಿ ಒದಗಿಸಿದ್ದು, ಕೆಲ ದಿನಗಳಲ್ಲಿ ಆಸ್ಪತ್ರೆಗೆ ತಲುಪುತ್ತದೆ, ಅಲ್ಲದೆ 25 ಆಕ್ಸಿಜನ್ ಸಿಲಿಂಡರ್ ಗಳನ್ನು ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ ಈಗಾಗಲೇ ಬಂಟ್ವಾಳ ತಾಲೂಕಿನಲ್ಲಿ ಎರಡು ಆಕ್ಸಿಜನ್ ಘಟಕಗಳ ಕೆಲಸ ಪ್ರಗತಿಯಲ್ಲಿದ್ದು, ಬಂಟ್ವಾಳ ಸರಕಾರಿ ಆಸ್ಪ ತ್ರೆಗೆ ಕೊಯಮುತ್ತೂರಿನಿಂದ ಆಕ್ಸಿಜನ್ ಘಟಕ ಆಗಮಿಸುತ್ತಿವೆ
ಈ ಸಂದರ್ಭದಲ್ಲಿ ಜಿ.ಪಂ.ಸಿಇಒ .ಕುಮಾರ್, ತಹಶೀಲ್ದಾರ್ ರಶ್ಮಿ. ಎಸ್.ಆರ್, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಸಮುದಾಯ ಆರೋಗ್ಯ ಕೇಂದ್ರ ದ ಪ್ರಭಾರ ವೈದ್ಯಾಧಿಕಾರಿ ಡಾ. ಸೌಮ್ಯ, ತಾ.ಪಂ.ಇ.ಒ.ರಾಜಣ್ಣ, ಬೂಡ ಆಧ್ಯಕ್ಷ ದೇವದಾಸ್ ಶೆಟ್ಟಿ, ಶಾಸಕರ ವಾರ್ ರೂಮ್ ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ಕೇಶವ ದೈಪಲ ಉಪಸ್ಥಿತರಿದ್ದರು.
Be the first to comment on "10 ಲಕ್ಷ ಮೊತ್ತದ ಸೌಲಭ್ಯಗಳನ್ನು ವೈಯಕ್ತಿಕ ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಒದಗಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್"