



ಬಂಟ್ವಾಳ: ಬಂಟ್ವಾಳದ ಎಲ್ಲ ಪೊಲೀಸ್ ಠಾಣೆಗಳಿಗೆ ಮಂಗಳವಾರ ಮಂಗಳೂರಿನ ಶ್ರೀ ದುರ್ಗಾ ಫೆಸಿಲಿಟೀಸ್ ಸಂಸ್ಥೆ ವತಿಯಿಂದ ಸ್ಯಾನಿಟೈಸೇಶನ್ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಹೊಂದುವ ಪೊಲೀಸರ ಸುರಕ್ಷಾ ದೃಷ್ಟಿಯಿಂದ ಸ್ಯಾನಿಟೈಸೇಶನ್ ಮಾಡಲಾಯಿತು ಎಂದು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಬೊಂಡಾಲ ಸಚ್ಚಿದಾನಂದ ಶೆಟ್ಟಿ ತಿಳಿಸಿದ್ದಾರೆ. ಬಂಟ್ವಾಳ ನಗರ, ಗ್ರಾಮಾಂತರ ಠಾಣೆಗಳು, ಡಿವೈಎಸ್ಪಿ ಕಚೇರಿ, ಟ್ರಾಫಿಕ್ ಠಾಣೆಗಳಿಗೆ ಮಂಗಳವಾರ ಸ್ಯಾನಿಟೈಸ್ ಮಾಡಲಾಯಿತು. ಈಗಾಗಲೇ ಮಂಗಳೂರಿನಲ್ಲಿ ಈ ಸೇವೆಯನ್ನು ಸಂಸ್ಥೆ ನೀಡಿದ್ದು, ಬಂಟ್ವಾಳದಲ್ಲೂ ಇದನ್ನು ಮುಂದುವರಿಸಲಾಗಿದೆ ಎಂದರು. ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬಂಧಿಸಿ ಕೊಠಡಿಗಳ ಸ್ಯಾನಿಟೈಸೇಶನ್ ಅನ್ನೂ ಸಂಸ್ಥೆ ಮಾಡಿಕೊಡಲು ಸಿದ್ಧವಿರುವುದಾಗಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹೇಳಿದರು.
Be the first to comment on "ಬಂಟ್ವಾಳ ಪೊಲೀಸ್ ಠಾಣೆಗಳಿಗೆ ಶ್ರೀದುರ್ಗಾ ಫೆಸಿಲಿಟೀಸ್ ವತಿಯಿಂದ ಸ್ಯಾನಿಟೈಸೇಶನ್"