


ಬಂಟ್ವಾಳ: ಬಂಟ್ವಾಳದಲ್ಲಿ ಎಸ್.ಡಿ.ಪಿ.ಐ. ವತಿಯಿಂದ ನಾವೂ ಬದುಕಬೇಕು ಎಂಬ ಆಂದೋಲನವನ್ನು ನಡೆಸಲಾಯಿತು. ಸರ್ವ ಪಕ್ಷ ಮತ್ತು ಸಂಘಟನೆಗಳು ಕರೆ ನೀಡಿರುವ ಜನಾಗ್ರಹ ಆಂದೋಲನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಬಿ.ಸಿ ರೋಡು ತಲಪಾಡಿ ಘಟಕದ ವತಿಯಿಂದ ಬೆಂಬಲ ವ್ಯಕ್ತಪಡಿಸುವ ಮೂಲಕ ಪ್ರತಿಭಟಿಸಲಾಯಿತು. ಪ್ರತಿಭಟನಾ ಕಾರರು ಜನವಿರೋಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ತಲಪಾಡಿ ಘಟಕ ಅಧ್ಯಕ್ಷ ಶಾಹುಲ್ ತಲಪಾಡಿ, ಪಾಪ್ಯುಲರ್ ಫ್ರಂಟ್ ಬಿ.ಸಿರೋಡು ಅಧ್ಯಕ್ಷ ಶರೀಫ್ ವಳವೂರು, ಅಕ್ಬರ್ ಅಲಿ ಪೊನ್ನೋಡಿ, ಅಶ್ರಫ್ ಬಿ.ಎಮ್.ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Be the first to comment on "ಎಸ್.ಡಿ.ಪಿ.ಐ.ನಿಂದ ಬಂಟ್ವಾಳದಲ್ಲಿ ‘ನಾವೂ ಬದುಕಬೇಕು’ ಆಂದೋಲನ"