ಕೊರೊನಾ ಸಲಿಕೆಯನ್ನು ಪಲ್ಸ್ ಪೊಲೀಯೋ ಲಸಿಕೆ ನೀಡಿದಂತೆ ವಿವಿಧ ಕೇಂದ್ರಗಳಲ್ಲಿ ಒದಗಿಸಿ, ಹಿರಿಯ ನಾಗರಿಕರಿಗೆ ಸಹಕಾರಿಯಾಗುವಂತೆ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ಶೇಷಪ್ಪ ಮಾಸ್ಟರ್, ಸದಸ್ಯ ದೊಂಬಯ್ಯ ಕುಲಾಲ್, ಯುವವೇದಿಕೆ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಸಂಚಾಲಕ ಕಾರ್ತಿಕ್ ಮಯ್ಯರಬೈಲ್,ಪುನೀತ್ ಭಂಡಾರಿಬೆಟ್ಟು ವಿನೀಶ್ ಕಾಮಾಜೆ ಜೊತೆಗಿದ್ದರು
ಲಸಿಕೆಯು ಪ್ರಾಥಮಿಕ ಮತ್ತು ಸಮುದಾಯ ಅರೋಗ್ಯ ಕೇಂದ್ರದಲ್ಲಿ ವಿತರಿಸುತ್ತಿದ್ದು, ಜನರಿಗೆ ವಾಹನವಿಲ್ಲದೆ ಹೋಗಿ ಬರಲು ಕಷ್ಟವಾಗುತ್ತಿದ್ದು, ಪಲ್ಸ್ ಪೋಲಿಯೊ ಲಸಿಕೆ ನೀಡಿದಂತೆ ಪಂಚಾಯತು, ಶಾಲೆ, ಅಂಗನವಾಡಿಗಳಲ್ಲಿ ದಿನಾಂಕಗಳನ್ನು ನಿಗದಿಪಡಿಸಿ, ಪ್ರಥಮವಾಗಿ ಹಿರಿಯ ನಾಗರಿಕರಿಗೆ ನಂತರ 45 ವರ್ಷ ಮೇಲ್ಪಟ್ಟವರಿಗೆ ಕೊನೆಗೆ ಇತರರಿಗೆ ವಿತರಿಸುವರೇ ಕ್ರಮಕೈಗೊಳ್ಳಬೇಕಾಗಿ ವಿನಂತಿಸಲಾಗಿದೆ.
Be the first to comment on "ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ"